January 16, 2025

Newsnap Kannada

The World at your finger tips!

m e

ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ : ತಾಯಿ ಚಾಮುಂಡೇಶ್ವರಿಗೆ ಮೊರೆ ಹೋದ ಸಚಿವ ಈಶ್ವರಪ್ಪ

Spread the love

ಇಲಾಖೆಯ ಅನುದಾನ ಬಿಡುಗಡೆ ವಿವಾದದ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್‌‌.ಈಶ್ವರಪ್ಪ, ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ತಾಯಿ ಮೊರೆ ಹೋಗಿದ್ದಾರೆ.

ಸಿಎಂ ಬಿ.ಎಸ್​ ಯಡಿಯೂರಪ್ಪ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು.

ಈ ಹಿನ್ನೆಲೆ ಈಶ್ವರಪ್ಪ ನಡೆಗೆ ಸಿಎಂ ಯಡಿಯೂರಪ್ಪರ ಆಪ್ತ ಸಚಿವರು ಹಾಗೂ ಶಾಸಕರು ತೀವ್ರ ಅಸಮಧಾನ ವ್ಯಕ್ತಪಡಿಸಿ, ಈಶ್ವರಪ್ಪರನ್ನು ಸಂಪುಟದಿಂದ ಕೈ ಬಿಡುವಂತೆ ಸಿಎಂ ಆಪ್ತರು ಸಹಿ ಸಂಗ್ರಹ ಮಾಡಿದ್ದಾರೆ.

ಈ ಕಾರಣದಿಂದ ಈಶ್ವರಪ್ಪಗೆ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಸಂಕಷ್ಟ ನಿವಾರಣೆಗಾಗಿ ಶುಕ್ರವಾರ ಕುಟುಂಬ ಸಮೇತ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು‌

ಮಧ್ಯಾಹ್ನದ ನಂತರ ಸುದ್ದಿಗೋಷ್ಠಿ ಮಾಡಿ ವಿವರ ನೀಡುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!