ಮಗಳಿಗೆ ಪಿಎಸ್ಐ ಚಾರ್ಜ್ ನೀಡಿದ ತಂದೆ: ಜಿಲ್ಲಾ ಮಂತ್ರಿ ಎನ್.ಚಲುವರಾಯಸ್ವಾಮಿ ಅಭಿನಂದನೆ

Newsnap Team
1 Min Read
Father who gave PSI charge to his daughter: District Minister N. Chaluvarayaswamy congratulated ಮಗಳಿಗೆ ಪಿಎಸ್ಐ ಚಾರ್ಜ್ ನೀಡಿದ ತಂದೆ: ಜಿಲ್ಲಾ ಮಂತ್ರಿ ಎನ್.ಚಲುವರಾಯಸ್ವಾಮಿ ಅಭಿನಂದನೆ

ಮಂಡ್ಯ: ವೆಂಕಟೇಶ್ ರವರು ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ ಸೆಂಟ್ರಲ್ ಪೋಲೀಸ್ ಠಾಣೆಗೆ ತಮ್ಮ ಮಗಳು ವರ್ಷಾ ರವರೇ ಮೊದಲ ಪೋಸ್ಟಿಂಗ್ ಆಗಿ ತಂದೆಯ ಸ್ಥಳಕ್ಕೆ ಬಂದ ಅಪರೂಪದ ಪ್ರಕರಣ ಮಂಡ್ಯದಲ್ಲಿ ಜರುಗಿದೆ.

ಈ ವಿಚಾರ ತಿಳಿದ ಕೂಡಲೆ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಯವರು ತಂದೆ – ಮಗಳಿಗೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಮಂಡ್ಯ ನಗರದ ಸೆಂಟ್ರಲ್ ಠಾಣೆಯಲ್ಲಿ ಪಿಎಸ್ಐ ಬಿ.ಎಸ್. ವೆಂಕಟೇಶ್ ರವರು ಮಂಡ್ಯ ಎಸ್ಪಿ ಕಛೇರಿಗೆ ವರ್ಗಾವಣೆಯಾಗಿದ್ದಾರೆ. ಅದೇ ಹುದ್ದೆಗೆ ಅವರ ಪುತ್ರಿ ಬಿ.ವಿ. ವರ್ಷಾ ನೇಮಕಗೊಂಡಿದ್ದಾರೆ.

ಪಿಎಸ್ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡು 2022 ರ ಬ್ಯಾಚ್ ನಲ್ಲಿ ಪಿಎಸ್ಐ ಆಗಿರುವ ವರ್ಷಾ ರವರು ಕಲಬುರುಗಿಯಲ್ಲಿ ತರಬೇತಿ ಮುಗಿಸಿ ಮಂಡ್ಯದಲ್ಲೇ ಒಂದು ವರ್ಷ ಪ್ರೋಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಈಗ ಪೋಸ್ಟಿಂಗ್ ಕೂಡ ಮಂಡ್ಯದಲ್ಲೇ ಆಗಿದೆ.ಅದೂ ಕೂಡ ತನ್ನ ತಂದೆ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಠಾಣೆಗೆ ಪಿಎಸ್ಐ ಆಗಿ ಪೋಸ್ಟಿಂಗ್ ಪಡೆದುಕೊಂಡಿರುತ್ತಾರೆ.ಯೋಗ , ಮಾನಸಿಕ – ದೈಹಿಕ ಆರೋಗ್ಯವೃದ್ಧಿಗೆ ಸಹಕಾರಿ : ಪ್ರತಾಪ್ ಸಿಂಹ

ತಂದೆಯಿಂದಲೇ ಪಿಎಸ್ಐ ಆಗಿ ಚಾರ್ಜ್ ಪಡೆದು ಪೋಲೀಸ್ ವೃತ್ತಿ ಜೀವನ ಪ್ರಾರಂಭಿಸಿರುವ ಅಪರೂಪದ ಪ್ರಕರಣ ಇದಾಗಿದೆ.

Share This Article
Leave a comment