ಕಳ್ಳತನಕ್ಕೆ ಅಪ್ಪನಿಂದಲೇ ಮಗನಿಗೆ ಟ್ರೈನಿಂಗ್ : ಅಪ್ಪ – ಮಗ ಅಂದರ್

Team Newsnap
1 Min Read
Father-son training for theft: Father-son Arrested ಕಳ್ಳತನಕ್ಕೆ ಅಪ್ಪನಿಂದಲೇ ಮಗನಿಗೆ ಟ್ರೈನಿಂಗ್ : ಅಪ್ಪ - ಮಗ ಅಂದರ್ #thenewsnap #kannada_news #mandya #latestnewws #india #Theft #crime #bengaluru #karnataka #Namma_Mysuru

ಬೆಂಗಳೂರು ಸಿಸಿಬಿ ಪೋಲಿಸರು ಅಪ್ಪ ಏಜಾಜ್ ಖಾನ್,‌ ಮಗ ಚೋರ್ ಇಮ್ರಾನ್ ಸೈಯದ್​ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ 15 ಹೊಸ ಪ್ರಕರಣಗಳು ಬೆಳಕಿಗೆ ಬಂದಿದಿವೆ

ಬಂಧಿತರಿಂದ 1ಕೆಜಿ 300 ಗ್ರಾಂ ಚಿನ್ನಾಭರಣ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಓದಿ –ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಎತ್ತಂಗಡಿ – ಸಂಗಪ್ಪ ಹೊಸ ಡಿಸಿ 

ಕಳ್ಳತನ ಹೇಗೆ ಮಾಡುವುದು ಮತ್ತು ಪೋಲಿಸರು ಹೇಗೆ , ಯಾವ ದಿಕ್ಕಿನಲ್ಲಿ ತನಿಖೆ ಮಾಡುತ್ತಾರೆ? ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಅಪ್ಪನೇ ಮಗನಿಗೆ ತರಬೇತಿ ನೀಡಿ ಈತನ ಸಾಲು ಸಾಲು ಕೃತ್ಯಕ್ಕೆ ಕಾರಣನಾಗಿದ್ದಾನೆ ಎಂಬ ಅಂಶವು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಚೋರ್​ ಇಮ್ರಾನ್​ಗೆ 15 ವರ್ಷವಿದ್ದಾಗಿನಿಂದ ಕಳ್ಳತನಕ್ಕೆ ಟ್ರೈನಿಂಗ್ ಕೊಟ್ಟಿದ್ದು ಸ್ವಂತ ತಂದೆಯಂತೆ. ಎಂಥದ್ದೆ ಭದ್ರತೆ ಇರುವ ಮನೆಗಳಲ್ಲೂ ಹತ್ತೇ ನಿಮಿಷಕ್ಕೆ ಮನೆಗಳ ಬೀಗ ಮುರಿದು ಕಳವು ಮಾಡ್ತಿದ್ದನಂತೆ. ಬಹಳ ಹಿಂದೆ ಪೊಲೀಸ್ ಮಾಹಿತಿದಾರ ಆಗಿದ್ದ ಅಪ್ಪ ಎಜಾಜ್ ಖಾನ್ ಮಗ ಚೋರ್​ ಇಮ್ರಾನ್​ಗೆ ಚಿಕ್ಕವಯಸ್ಸಿನಲ್ಲೇ ಕಳ್ಳತನದ ಟ್ರೇನಿಂಗ್ ಕೊಡ್ತಿದ್ದನಂತೆ.

Share This Article
Leave a comment