ವರ ಮಹಾಲಕ್ಷೀ ಹಬ್ಬಕ್ಕೆ ತಾವರೆ ಹೂವು ಕೀಳಲು ಕೆರೆಗೆ ಇಳಿದಿದ್ದ ಅಪ್ಪ ಮಗ ದಾರುಣ ಸಾವು

Team Newsnap
1 Min Read

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭೂಚನಹಳ್ಳಿ ಸಮೀಪದ ಕೆರೆಯಲ್ಲಿ ತಾವರೆ ಹೂ ತರುವುದಕ್ಕೆ ಕೆರೆಗೆ ಇಳಿದಿದ್ದ ತಂದೆ, ಮಗ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ವರ ಮಹಾಲಕ್ಷೀ ಹಬ್ಬದ ಪ್ರಯುಕ್ತ ತಾವರೆ ಹೂ ತಂದು ಮಾರಾಟ ಮಾಡುವುದಕ್ಕೆ , ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿಯಲ್ಲಿನ ಕೆರೆಗೆ ತಂದೆ ಪುಟ್ಟರಾಜು(42) ಹಾಗೂ ಮಗ ಕೇಶವ್(14) ಇಳಿದಿದ್ದರು.

ಈ ವೇಳೆಯಲ್ಲಿ ಕೆರೆಯ ನೀರಿನಲ್ಲಿ ಮಗ ಕೇಶವ್ ಮುಳುಗುತ್ತಿದ್ದದ್ದು ಗಮನಿಸಿದ ತಂದೆ ಪುಟ್ಟರಾಜು ರಕ್ಷಿಸಲು ಹೋಗಿ, ಇಬ್ಬರೂ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರು ದೊಡ್ಡಬಳ್ಳಾಪುರದ ಶಾಂತಿನಗರ ನಿವಾಸಿಗಳು, ಈ ಸಂಬಂಧ ದೊಡ್ಡಬೆಳಮಂಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment