ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ಅಪ್ಪು ಗೌಡನ ಮೇಲೆ ಮಾರಣಾಂತಿಕ ಹಲ್ಲೆ : ಪ್ರಾಣಾಪಾಯದಿಂದ ಪಾರು

Team Newsnap
1 Min Read

ಜೆಡಿಎಸ್ ಮುಖಂಡ ಹಾಗೂ ಸಮಾಜ ಸೇವಕ ಅಪ್ಪು ಪಿ ಗೌಡ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿದ

ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನದ ಬಳಿ ನಡೆದ ಈ ಮಾರಣಾಂತಿಕ ಹಲ್ಲೆ
ಮಾಡಿ ಕೊಲೆಯತ್ನ ಮಾಡಿರುವ ಘಟನೆ ಜರುಗಿದೆ.

ಪಟ್ಟಣದ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಅಪ್ಪು ಪಿ ಗೌಡ ಅವರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ 4 ರಿಂದ 5 ಮಂದಿ ದುಷ್ಕರ್ಮಿಗಳ ಗುಂಪು ಏಕಾಏಕಿ ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿದ್ದಾರೆ. ನಟಿ, ಮಾಜಿ ಸಂಸದೆ ‘ಜಯಪ್ರದಾ’ಗೆ 6 ತಿಂಗಳು ಜೈಲು ಶಿಕ್ಷೆ – 5 ಸಾವಿರ ರು ದಂಡ

ಈ ವೇಳೆ ಅಪ್ಪು ಅವರಿಗೆ ಕತ್ತು, ಹೊಟ್ಟೆ, ಕೈ ಹಾಗೂ ಬೆನ್ನಿನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಪೂಜೆಗೆ ಆಗಮಿಸಿದ್ದ ಮುಖ್ಯ ಪೇದೆ ಕುಮಾರಸ್ವಾಮಿ ಹಾಗೂ ಭಕ್ತಾದಿಗಳು ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಿದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮದ್ದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
Leave a comment