FASTag ಕಳ್ಳರು ಇದ್ದಾರೆ ಹುಷಾರ್ – ಫೇಕ್‌ ವೀಡಿಯೋ ?

Team Newsnap
1 Min Read
FASTag thieves alert- Fake video?#thenewsnap #fastag #fake_tweet #fake_news #latestnews #social_media #kannada_news #india #mysuru #bengaluru_news #Mandya

ಕಾರು ಸ್ವಚ್ಛ ಮಾಡುವ ನೆಪದಲ್ಲಿ ಬಾಲಕನೊಬ್ಬ ಮುಂದುಗಡೆಯ ಗ್ಲಾಸ್‌ ಕ್ಲೀನ್‌ ಮಾಡುತ್ತಿರುತ್ತಾನೆ. ಫಾಸ್ಟ್‌ ಟ್ಯಾಗ್‌ ಇರುವ ಜಾಗದಲ್ಲಿ ತನ್ನ ಬಲಕೈಯಲ್ಲಿರುವ ವಾಚ್ ಅನ್ನು ತಂದು ಸ್ಕ್ಯಾನ್‌ ಮಾಡುತ್ತಾನೆ. ಕೂಡಲೇ ಈ ಫಾಸ್ಟ್‌ ಟ್ಯಾಗ್ ಖಾತೆಯಲ್ಲಿರುವ ಹಣ ವರ್ಗಾವಣೆಯಾಗುತ್ತದೆ ಎಂದು ಕಾರಿನಲ್ಲಿರುವ ವ್ಯಕ್ತಿ ಹೇಳುತ್ತಾನೆ.

ಫಾಸ್ಟ್‌ಟ್ಯಾಗ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಖಾತೆಯಿಂದ ಹಣವನ್ನು ವಂಚನೆ ಮಾಡಲಾಗುತ್ತದೆ ಎಂಬ ಸಂದೇಶವಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಈ ವೀಡಿಯೋ ಫೇಕ್‌ ಆಗಿದ್ದು ಈ ರೀತಿಯ ಯಾವುದೇ ವಂಚನೆ ಆಗುವುದಿಲ್ಲ ಎಂದು FASTag NETC ತಿಳಿಸಿದೆ.ಇದನ್ನು ಓದಿ –ಮಾಗಡಿಯಲ್ಲಿ ಕಲ್ಯಾಣಿಗೆ ಬಿದ್ದು ತಾಯಿ-ಮಗು ದಾರುಣ ಸಾವು

ಸರ್ಕಾರದ ಉತ್ತರ?
FASTag ನಲ್ಲಿ RFID( ರೇಡಿಯೋ ತರಂಗಾಂತರ ಗುರುತಿಸುವಿಕೆ ಅಥವಾ Radio-frequency identification) ಇರುತ್ತದೆ. ಬ್ಯಾಂಕ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ಮತ್ತು ಪ್ರತ್ಯೇಕ ಯುಪಿಐ ಐಡಿ ಇರುತ್ತದೆ.

ಯಾವುದೇ ಅನಧಿಕೃತ ಸಾಧನ ಬಳಸಿ FASTag ನಲ್ಲಿ ಯಾವುದೇ ಹಣಕಾಸಿನ ವಹಿವಾಟುಗಳ ನಡೆಸಲು ಸಾಧ್ಯವಿಲ್ಲ ಎಂದು NETC FASTag ಸ್ಪಷ್ಟಪಡಿಸಿದೆ.

Share This Article
Leave a comment