ಪ್ರಮುಖ ಬೆಳೆ ಜತೆಗೆ ಪರ್ಯಾಯ ಕೃಷಿಯತ್ತಲೂ ರೈತರು ಗಮನ ನೀಡಬೇಕೆಂದು ಕೇಂದ್ರದ ಕೃಷಿ ಖಾತೆ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಆತ್ಮಹತ್ಯೆ ಯೋಚನೆಯನ್ನು ರೈತರು ಬಿಡಬೇಕು.
ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸಚಿವರು ಕಲಬುರ್ಗಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಶೋಭಾ ಪ್ರತಿಕ್ರಿಯಿಸಿ, ಹೋರಾಟ ಮಾಡುತ್ತಿರುವ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಈಗಾಗಲೇ 11 ಸುತ್ತು ಚರ್ಚೆ ನಡೆಸಿದೆ. ಕೃಷಿ ಕಾಯ್ದೆ ಯಾವ ಉದ್ದೇಶಕ್ಕೆ ಮಾಡಲಾಗಿದೆ ಎಂಬುದನ್ನು ಹೋರಾಟ ನಡೆಸುತ್ತಿರುವವರು ಅರಿತುಕೊಳ್ಳಬೇಕು. ಈಗಲೂ ಚರ್ಚೆಗೆ ಸರ್ಕಾರ ಸಿದ್ಧ ಎಂದು ಪುನರುಚ್ಚರಿಸಿದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ