May 26, 2022

Newsnap Kannada

The World at your finger tips!

sunni leion

ಮಂಡ್ಯದಲ್ಲಿ ‘ನೀಲಿತಾರೆ’ ಸನ್ನಿಲಿಯೋನ್ ಹುಟ್ಟು ಹಬ್ಬ ಆಚರಿಸಿದ ಅಭಿಮಾನಿಗಳು

Spread the love

ಮಂಡ್ಯಕ್ಕೂ ನೀಲಿತಾರೆ ಸನ್ನಿಲಿಯೋನ್ ಗೂ ಅವಿನವಭಾವ ನಂಟು, ಆಕೆಯನ್ನು ಸಮಾಜದಲ್ಲಿ ಜನ ನೋಡುವ ದೃಷ್ಟಿಯೇ ಬೇರೆ, ಆದರೆ ಸಕ್ಕರೆ ನಾಡಿನಲ್ಲಿ ಆಕೆಗೂ ಅಭಿಮಾನಿಗಳ ಬಳಗವಿದೆ.ಸನ್ನಿಲಿಯೋನ್‍ನ ಸಮಾಜ ಸೇವೆಯನ್ನು ಸ್ಪೂರ್ತಿಯಾಗಿ ಪಡೆದುಕೊಂಡ ಅಭಿಮಾನಿಗಳು ಇಂದು ಆಕೆಯ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದಾರೆ.

sanni dial

ಮಂಡ್ಯ ತಾಲೂಕಿನ ಕಾರಸವಾಡಿ ಗ್ರಾಮದ ಪ್ರಸಾದ್, ಮಂಡ್ಯದ ನೂರಡಿ ರಸ್ತೆಯ ಕರ್ನಾಟಕ ಬಾರ್ ವೃತ್ತದಲ್ಲಿ ಡಿಕೆ ಫ್ರೆಶ್ ಚಿಕನ್ ಸೆಂಟರ್ ಇಟ್ಟಿದ್ದಾರೆ. ಇವರು ಸನ್ನಿಲಿಯೋನ್ ಮಾಡುವ ಸಮಾಜ ಸೇವೆಗೆ ಮಾರುಹೋಗಿ ಆಕೆಯ ಅಪ್ಪಟ ಅಭಿಮಾನಿ.

ಆಕೆ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವ ಕೆಲಸಕ್ಕೆ ಫುಲ್ ಫಿದಾ ಆಗಿದ್ದಾರೆ. ಹೀಗಾಗಿ ಇಂದು ಸನ್ನಿಲಿಯೋನ್ ಅವರ 41ನೇ ಹುಟ್ಟು ಹಬ್ಬದ ಹಿನ್ನೆಲೆ ಚಿಕನ್ ಸೆಂಟರ್ ಎದುರು ಕೇಕ್ ಕತ್ತರಿಸಿ ಬಡವರಿಗೆ ಬಿರಿಯಾನಿಯನ್ನು ಹಂಚಿದ್ದಾರೆ.

ಇದನ್ನು ಓದಿ :ಕಾಳಿ ಸ್ವಾಮಿ ಮುಖಕ್ಕೆ ಮಸಿ ಬಳಿದ ಗುಂಪು – ಬೆಂಗಳೂರಿನಲ್ಲಿ ಕೃತ್ಯ

ಸಾಮಾಜಿಕ ಜಾಲತಾಣದಲ್ಲಿ ಸನ್ನಿಯ ಪೋಸ್ಟ್ ಗಳಿಗೆ ಅತೀ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಮಾಡಿದ ಅಭಿಮಾನಿಗಳಗೆ ತಮ್ಮ ಚಿಕನ್ ಸೆಂಟರ್ ನಲ್ಲಿ ಶೇ 10 ರಷ್ಟು ರಿಯಾಯ್ತಿ ಸಹ ನೀಡಿದ್ದಾರೆ. ಮಂಡ್ಯ ತಾಲೂಕಿನ ಕೊಮ್ಮೇರನಹಳ್ಳಿ ಗ್ರಾಮದಲ್ಲೂ ಸಹ ಸನ್ನಿಲಿಯೋನ್ ಬರ್ತಡೇ ಆಚರಣೆ ಮಾಡಿದ್ದಾರೆ. ಗ್ರಾಮದ ರಸ್ತೆಯ ಬಳಿ ಅನಾಥ ಮಕ್ಕಳ ತಾಯಿ ಎಂದು ಸನ್ನಿಲಿಯೋನ್‍ನ 20 ಅಡಿ ಉದ್ದದ ಫೆಕ್ಸ್ ಹಾಕಲಾಗಿದೆ.

ಅವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಮಾಡಬೇಕೆಂದು ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ರಕ್ತದಾನ ಶಿಬಿರ ಮಾಡಲಾಯಿತು. ಬಳಿಕ ಗ್ರಾಮದ ಮಕ್ಕಳ ಕೈಯಲ್ಲಿ ಕೇಕ್ ಕತ್ತರಿಸಿ ಇಲ್ಲಿನ ಗ್ರಾಮಸ್ಥರು ಸಂಭ್ರಮಿಸಿ ನಂತರ ಜನರಿಗೆ ಊಟವನ್ನು ಹಾಕಲಾಯಿತು.

error: Content is protected !!