ಕುಟುಂಬ ರಾಜಕಾರಣ ಬೇಕು : ಮೋದಿ ಮಕ್ಕಳ ಮಾಡದೇ ಹೋದರೆ ನನ್ನ ತಪ್ಪೆ? ಇಬ್ರಾಹಿಂ

Team Newsnap
1 Min Read
Family politics: am i at fault Modi does not do children? Ibrahim

ಕುಟುಂಬ ರಾಜಕಾರಣವಿದ್ದಷ್ಟು ವಂಶ ವೃಕ್ಷ ಬೆಳೆಯುತ್ತದೆ. ಪರಸ್ಪರ ಹಿರಿಯರಿಗೆ ಗೌರವ ಸಿಗುತ್ತದೆ. ಮೋದಿ ಮಕ್ಕಳು ಮಾಡದಿದ್ದರೆ ಅದು ನನ್ನ ತಪ್ಪಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದರು

ಇದನ್ನು ಓದಿ:ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ – 9 ಸಾವು, 20 ಮಂದಿಗೆ ಗಾಯ

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ , ನಾವು ರೈತರು ಕಾಳು ಬೆಳೆದರೆ ಮಾರುವ ಕಾಳು ಬೇರೆ, ಬಿತ್ತನೆ ಕಾಳು ಬೇರೆ ಎಂದು ಇಟ್ಟುಕೊಳ್ಳುತ್ತೇವೆ. ಹಾಗೆಯೇ ಬಿಜೆಪಿ ಅವರಿಗೆ ಮೋದಿ ಅಭಿಮಾನವಿದ್ದರೆ ನಮಗೆ ದೇವೇಗೌಡ ಅಭಿಮಾನ. ಕುಟುಂಬ ರಾಜಕಾರಣದಿಂದ ಗೌರವ ಬೆಳೆಯುತ್ತದೆ ಎಂದರು

ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ ಇತ್ತು. ಇಂದಿರಾಗಾಂಧಿ ನಂತರ, ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲಿಲ್ಲವೇ? ಈಗ ಮೋದಿ ಅವರು ಮಕ್ಕಳು ಮಾಡದೇ ಇದ್ರೆ ಅದು ನನ್ನ ತಪ್ಪಾ ಅಂದು ಹಾಸ್ಯ ಮಾಡಿದರು

ಪಠ್ಯಪುಸ್ತಕ ವಿಚಾರದಲ್ಲಿ ಬಸವಣ್ಣ, ಕುವೆಂಪು ಸೇರಿದಂತೆ ಅನೇಕರ ವಿಚಾರದಲ್ಲಿ ಅಪಮಾನ ನಡೆಯುತ್ತಿದೆ. ಹೀಗಿದ್ದೂ ಬೊಮ್ಮಾಯಿ ಯಾಕೆ ಈ ತಪ್ಪು ಕೆಲಸ ಮಾಡುತ್ತಿದ್ದೀರಿ? ಬಸವ ಪರಂಪರೆಯಲ್ಲಿ ಹುಟ್ಟಿ ಯಾಕೆ ಈ ಅವಮಾನ ಮಾಡುತ್ತಿದ್ದೀರಿ? ಈ ಬಗ್ಗೆ ಸಮಿತಿ ಮಾಡಿ ಅವರಿಗೆ ಶಿಕ್ಷೆಗೊಳಪಡಿಸಬೇಕು? ಎಂದು ಆಗ್ರಹಿಸಿದ್ದಾರೆ.

Share This Article
Leave a comment