ಕೌಟುಂಬಿಕ ಕಲಹ : ಪತ್ನಿಯಿಂದಲೇ ಐಎಎಸ್ ಅಧಿಕಾರಿ ವಿರುದ್ಧ ದೂರು

Team Newsnap
1 Min Read

ಬೆಂಗಳೂರು : ತಾರಕಕ್ಕೆ ಏರಿರುವ ಕೌಟುಂಬಿಕ ಕಲಹದಿಂದಾಗಿ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ಅವರ ಪತ್ನಿ ಡಾ. ವಂದನಾ ದೂರು ನೀಡಿದ್ದಾರೆ.

ಮದುವೆಯಾಗಿ ಒಂದು ವರ್ಷದಲ್ಲಿಯೇ ದಂಪತಿ ನಡುವೆ ಬಿರುಕು ಬಿಟ್ಟಿದೆ.

ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಹಾಗೂ ಟ್ರಾಫಿಕರ್ ಆಫ್ ಡಾಕ್ಟರ್ ವಂದನಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ ಆರೋಪಿಸಿ ನಿವೃತ್ತ ಐಪಿಎಸ್ ಅಧಿಕಾರಿ ಮಗಳು ಡಾ. ವಂದನಾ ಅವರು ತಮ್ಮ ಪತಿ ಹಾಗೂ ಹಾಲಿ ಐಎಎಸ್ ಅಧಿಕಾರಿಯಾಗಿರುವ ಅಕಾಶ್ ಶಂಕರ್ ವಿರುದ್ಧ ದೂರು ದಾಖಲಿಸಿದ್ದಾರೆ.

ಈಸ್ಟ್ ಝೋನ್ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ, ಹಲ್ಲೆ ಪ್ರಕರಣ ದಾಖಲು ಮಾಡಿದ್ದರು. ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಅವರ ತಂದೆ ಶಂಕರ್, ತಾಯಿ ಚಂದ್ರಿಕಾ ಮೇಲೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು.

50 ಲಕ್ಷ ಖರ್ಚು ಮಾಡಿ ಅರಮನೆ ಮೈದಾನದಲ್ಲಿ ಮದುವೆ ಮಾಡಿಸಿ ವರದಕ್ಷಿಣೆ ಕೊಟ್ಟರೂ ಮತ್ತೆ ಹಣದಾಹ ಇದೆ. ಅಷ್ಟೇ ಅಲ್ಲದೆ ಆಕಾಶ್ ಶಂಕರ್ ಬೇರೆ ಮಹಿಳೆಯ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆಂದೂ ದೂರಿನಲ್ಲಿ ಆರೋಪಿಸಿದ್ದರು.

ತನ್ನ ತಂದೆ ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್ ಸುರೇಶ್ ಹಾಗೂ ತನಗೆ ಭಯದ ವಾತಾವರಣ ಸೃಷ್ಟಿ ಮಾಡ್ತಿದ್ದಾರೆ. ಅನಾನಿಮಸ್ ಐಪಿಎಸ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಎಂದೆಲ್ಲಾ ಮೆಸೇಜ್ ಮಾಡಿ ಕುಟುಂಬದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆಂದು ಎಂದು ವಂದನಾ ದೂರಿನಲ್ಲಿ ತಿಳಿಸಿದ್ದಾರೆ.ಜಲಾಶಯಗಳ ಇಂದಿನ ನೀರಿನ ಮಟ್ಟ

ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Share This Article
Leave a comment