ಬೆಂಗಳೂರಿನಲ್ಲಿ ಫ್ಯಾಕಲ್ಟಿ ಡೆವಲೆಪ್ಮೆಂಟ್ ಪ್ರೋಗ್ರಾಮ್ ಯಶಸ್ವಿ

Team Newsnap
1 Min Read

ಬೆಂಗಳೂರಿ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಐದು ದಿನಗಳ ಕಾಲ “ಸ್ಮಾಟ್೯ ಗ್ರಿಡ್ ಮತ್ತು ಮಷಿನ್ ಲರ್ನಿಂಗ್ ಅಪ್ಲಿಕೇಷನ್” ದ ಐದು ದಿನಗಳ ಫ್ಯಾಕಲ್ಟಿ ಡೆವಲೆಪ್ಮೆಂಟ್ ಪ್ರೋಗ್ರಾಮ್ ಅನ್ನು ಯಶಸ್ವಿಯಾಗಿ ನಡೆಸಿತು.

“ಸ್ಮಾಟ್ರ‍್ ೯ ಗ್ರಿಡ್ ಅಪ್ಲಿಕೇಷನ್’ ಗಳಿಗಾಗಿ ಬೇರೆ ಬೇರೆ ರಾಜ್ಯಗಳ ತಾಂತ್ರಿಕ ಕಾಲೇಜುಗಳ ಅಧ್ಯಾಪಕರು ಆನ್‌ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇಶಾದ್ಯಂತ ಹದಿನೆಂಟು ರಾಜ್ಯಗಳಿಂದ 200 ಪ್ರೊಫೆಸರ್‌ಗಳು ನೊಂದಾಯಿಸಿಕೊಂಡಿದ್ದರು.

ಐದು ದಿನದ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಎನ್. ರಾಣಾ ಪ್ರತಾಪ್ ರೆಡ್ಡಿ, ವಿದ್ಯುತ್ ವಿಭಾಗದ ಮುಖ್ಯಸ್ಥರು ಡಾ. ಪಿ. ಕೆ. ಕುಲಕರ್ಣಿ ಮತ್ತು ಸಂಯೊಜಕರಾದ ಪ್ರೊ. ಕೆ. ಹೇಮಚಂದ್ರ ರೆಡ್ಡಿ ಹಾಗೂ ಪ್ರೊ. ಜೆ. ಜಿತೆಂದ್ರನಾಥ್ ಉಪಸ್ಥಿತರಿದ್ದರು.

ಪ್ರತಿದಿನ ಮೂರು ವಿವಿಧ ತಾಂತ್ರಿಕ ವಿಷಯಗಳ ಬಗ್ಗೆ ರಾಷ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರತಿಷ್ಠಿತ ಪ್ರೊಫೆಸರ್‌ಗಳು ಬೋಧಿಸಿದರಲ್ಲದೆ ಭಾಗವಹಿಸಿದ್ದರು.‌ ಪ್ರಶ್ನೋತ್ತರಗಳ ಮೂಲಕ ಮಾಹಿತಿ ಹಂಚಿಕೊಂಡರು.

Share This Article
Leave a comment