ತಮಿಳುನಾಡು ಪಟಾಕಿ ಕಾರ್ಖಾನೆ ದುರಂತ: 19 ಸಾವು, 30 ಕ್ಕೂ ಹೆಚ್ಚು ಗಾಯ

Team Newsnap
1 Min Read

ಫೆ 12 ರಂದು ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 19 ಜನ ಪ್ರಾಣ ಕಳೆದುಕೊಂಡಿದ್ದಾರೆಂದು ವಿರುಧುನಗರದ ಜಿಲ್ಲಾಧಿಕಾರಿ ಆರ್‌ ಕಣ್ಣನ್‌ ತಿಳಿಸಿದ್ದಾರೆ.

ಫೆಬ್ರವರಿ 12 ರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆ ಸತ್ತೂರು ಬಳಿಯ ಅಚಂಕುಲಂ ಗ್ರಾಮದ ಪಟಾಕಿ ದೊಡ್ಡ ಮಟ್ಟದ ಶಬ್ಧ ಕೇಳಿ ಬಂದಿತು. ನಂತರ ಭಾರಿ ಬೆಂಕಿಕಾಣಿಸಿಕೊಂಡಿದೆ ಎಂದರು.‌

ಪಟಾಕಿ ತಯಾರಿಕೆಗೆ ಬಳಸುವ ರಾಸಾಯನಿಕ ಬೆರೆಸುವ ವೇಳೆ ಸ್ಫೂಟ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಶಕ್ತಿವೇಲ್‌ ಒಡೆತನದ ಈ ಕಾರ್ಖಾನೆಯಲ್ಲಿ ನೂರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಘಟಕಕ್ಕೆ ಫ್ಯಾನ್ಸಿ ಕ್ರ್ಯಾಕರ್‌ ತಯಾರಿಸುವ ಪರವಾನಿಗೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಅಗ್ನಿಅವಘಡದಲ್ಲಿ 9 ಜನ ಸ್ಥಳದಲಿಯೇ ಸಾವನ್ನಪ್ಪಿದ್ದಾರೆ.

30 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸತ್ತೂರು, ಕೋವಿಲ್ಪಟ್ಟಿ ಮತ್ತು ಸಿವಕಾಸಿ ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

5 ಲಕ್ಷ ರು ಪರಿಹಾರ

ಘಟನೆಯಲ್ಲಿ ಪ್ರಾಣಕಳೆದು ಕೊಂಡವರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಚ, ತಮಿಳುನಾಡಿನ ಸಿಎಂ ಕೆ. ಪಳನಿಸ್ವಾಮಿ ಸರ್ಕಾರ ತಲಾ 3 ಲಕ್ಷ ಮತ್ತು ಘಟನೆಯಲ್ಲಿ ಗಾಯಗೊಂಡ ಕುಟುಂಬಕ್ಕೆ 1 ಲಕ್ಷ ಪರಿಹಾರ ಧನ ಘೋಷಿಸಲಾಗಿದೆ.

Share This Article
Leave a comment