ಬೆಂಗಳೂರು, ಜ. 21: ಕೆ.ಆರ್. ಮಾರುಕಟ್ಟೆಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸುಲಿಗೆ, ವಿಜಯಪುರದಲ್ಲಿ ಮೂವರು ಕೂಲಿ ಕಾರ್ಮಿಕರ ಮೇಲೆ ಅಮಾನವೀಯ ಹಲ್ಲೆ, ಇಂತಹ ಘಟನೆಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರವನ್ನು ಕಠಿಣವಾಗಿ ಪ್ರಶ್ನಿಸಿದ್ದಾರೆ.
ಸಮಾಜ ಮಾಧ್ಯಮದಲ್ಲಿ ಆಕ್ರೋಶ
ತಮ್ಮ ಎಕ್ಸ್ (ಮಾಜಿ ಟ್ವಿಟರ್) ಖಾತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಅಶೋಕ್, 5 ದಿನಗಳಲ್ಲಿ ಬೀದರ್, ಮಂಗಳೂರು, ಚಿತ್ರದುರ್ಗ, ಮೈಸೂರು, ಆನೇಕಲ್, ಮತ್ತು ಹುಬ್ಬಳ್ಳಿ ಸೇರಿ ಒಟ್ಟು 6 ದರೋಡೆ, ಸುಲಿಗೆ, ಮತ್ತು ಕಳ್ಳತನ ಪ್ರಕರಣಗಳನ್ನು ಲೆಕ್ಕಹಾಕಿದ್ದಾರೆ.
ಸಿಎಂ Siddaramaiah ವಿರುದ್ಧ ಕಿಡಿ
ಅಶೋಕ್, “ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಜನರು ಭಯದ ವಾತಾವರಣದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಸುರಕ್ಷಿತವಾಗಿ ಓಡಾಡಲು ಸಾಧ್ಯವಿಲ್ಲ. ಇಂತಹ ಅಪಾಯಕಾರಿ ಪರಿಸ್ಥಿತಿಯ ನಡುವೆ ಇನ್ನೆಷ್ಟು ದಿನ ದುರಾಡಳಿತ ನಡೆಸುತ್ತೀರಿ? ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನತೆಗೆ ದಾರಿ ತಪ್ಪುವ ಆಡಳಿತದಿಂದ ಮುಕ್ತಿ ಕೊಡಿ” ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧ ವ್ಯವಸ್ಥೆಯ ಕುರಿತು ಟೀಕೆ
“ಕೊಠಡಿಗೆ ಬೀಗ, ಸಿಬ್ಬಂದಿ ಗೈರು! ಇದು ಕಾಂಗ್ರೆಸ್ ಸರ್ಕಾರದ ಹೊಸ ಘೋಷವಾಕ್ಯ. ಮುಖ್ಯಮಂತ್ರಿಗಳು, ಸಚಿವರು, ಮತ್ತು ಅಧಿಕಾರಿಗಳು ಗುರುವಾರ ಮಾತ್ರ ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಬಾಕಿ ದಿನಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಯಾರು?” ಎಂದು ಪ್ರಶ್ನೆ ಮಾಡಿರುವ ಅಶೋಕ್, ಅಧಿಕಾರಿಗಳ ನಿರ್ಲಕ್ಷ್ಯವನ್ನು ಕೂಡ ತೀವ್ರವಾಗಿ ಟೀಕಿಸಿದ್ದಾರೆ.
“ಕಾಂಗ್ರೆಸ್ ಹೆಸರಿಗೆ ಮಾತ್ರ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ! ಆದರೆ ಇಂದಿನ ಕಾಂಗ್ರೆಸ್ ನಾಯಕರಲ್ಲಿ ನಕಲಿ ಗಾಂಧಿಗಳು ಮತ್ತು ಅವರ ಗುಲಾಮರು ಮಾತ್ರ ಕಾಣಿಸುತ್ತಿದ್ದಾರೆ” ಎಂದು ಆರ್. ಅಶೋಕ್ ಟೀಕಾ ಪ್ರಹಾರ ಮಾಡಿದ್ದಾರೆ.ಇದನ್ನು ಓದಿ –ವಂಚನೆ ಆರೋಪ: ಮಂಡ್ಯದಲ್ಲಿ ಐಶ್ವರ್ಯಗೌಡ ವಿರುದ್ಧ ಮತ್ತೊಂದು FIR ದಾಖಲು
ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮತ್ತು ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಆರ್. ಅಶೋಕ್ ತಮ್ಮ ಅಕ್ರೋಶವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನರ ಸುರಕ್ಷತೆಗೆ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
More Stories
ಇಂಡಿಯನ್ ಆಯಿಲ್ ಲಿಮಿಟೆಡ್ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ
ಇಂದಿನಿಂದಲೇ ಬಿಯರ್ ದರ ಹೆಚ್ಚಳ – ಹೊಸ ಬೆಲೆ ವಿವರ !
ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ