ಬೆಂಗಳೂರು – ಮೈಸೂರು – ಮಂಗಳೂರು ರೈಲು ಮುರುಡೇಶ್ವರದವರೆಗೂ ವಿಸ್ತರಣೆ

Team Newsnap
1 Min Read

ಮಂಗಳೂರು: ಬೆಂಗಳೂರಿನಿಂದ ಮೈಸೂರು ಮೂಲಕ ಮಂಗಳೂರಿಗೆ ಪ್ರಯಾಣಿಸುವ ರೈಲನ್ನು ಮುರುಡೇಶ್ವರದವರೆಗೂ ವಿಸ್ತರಿಸಲಾಗುತ್ತಿದೆ.

ಭಾರತೀಯ ರೈಲ್ವೇ ಸಚಿವಾಲಯ ಈ ವಿಷಯ ತಿಳಿಸಿ ಬೆಂಗಳೂರು ಹಾಗೂ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲು​ ಮುರುಡೇಶ್ವರದವರೆಗೆ ವಿಸ್ತರಿಸಿ, ಮಂಗಳೂರಿನಿಂದ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ಅನ್ನು ಮುರುಡೇಶ್ವರದಿಂದ ಆರಂಭಿಸುವಂತೆ ಇಲಾಖೆ ಆದೇಶ ಹೊರಡಿಸಿದೆ.

ಈ ರೈಲು ಬೈಯಪ್ಪನಹಳ್ಳಿಯಿಂದ ಹೊರಟು ರಾತ್ರಿ 9ಕ್ಕೆ ಮೆಜೆಸ್ಟಿಕ್‌ಗೆ ಬರಲಿದೆ, ಮೈಸೂರು, ಮಂಗಳೂರು, ಉಡುಪಿ, ಕುಂದಾಪುರ ಮಾರ್ಗವಾಗಿ ಮುರುಡೇಶ್ವರ ಸೇರಲಿದೆ.

ಮುರುಡೇಶ್ವರದಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಬೆಳಗ್ಗೆ 6ಕ್ಕೆ ಬೆಂಗಳೂರು ಸೇರುತ್ತದೆ ಎಂದು ರೈಲ್ವೆ ಸಚಿವಾಲಯದ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಹಾಗೂ ಗೌತಮ ಶೆಟ್ಟಿ ತಿಳಿಸಿದ್ದಾರೆ.ರೋಹಣಿ ಸಿಂಧೂರಿ ವಿರುದ್ಧ ಇಲಾಖಾ ತನಿಖೆ: ಸರ್ಕಾರದ ಆದೇಶ

ಪ್ರಯಾಣದ ವಿವರ :

  • ರೈಲು ಸಂಖ್ಯೆ : 16585 ಎಸ್‌ಎಂವಿಟಿ ಸ್ಟೇಷನ್‌ನಿಂದ ರಾತ್ರಿ 8.15ಕ್ಕೆ ಹೊರಡಲಿದೆ.
  • ರಾತ್ರಿ 11.40ಕ್ಕೆ ಮೈಸೂರು ತಲುಪಲಿದೆ.
  • ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 8.55ಕ್ಕೆ ತಲುಪಲಿದೆ.
  • ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 9.20ಕ್ಕೆ ಹೊರಡಲಿದೆ
  • ಮಧ್ಯಾಹ್ನ 1.20ಕ್ಕೆ ಮುರುಡೇಶ್ವರ ತಲುಪಲಿದೆ. ಬಳಿಕ ಮುರುಡೇಶ್ವರದಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಬೆಳಗ್ಗೆ 6ಕ್ಕೆ ಬೆಂಗಳೂರು ಸೇರುತ್ತದೆ

Share This Article
Leave a comment