ರಾಹುಲ್ ಗೆ ಏ. 13 ರ ತನಕ ಜಾಮೀನು ವಿಸ್ತರಣೆ

Team Newsnap
1 Min Read
Extension of bail till april 13 to Rahul ರಾಹುಲ್ ಗೆ ಏ. 13 ರ ತನಕ ಜಾಮೀನು ವಿಸ್ತರಣೆ
  • ಮೇ 3 ರಂದು ಮೇಲ್ಮನವಿ ವಿಚಾರಣೆ

ಸೂರತ್:
ಮಾನಹಾನಿ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸೂರತ್ ಜಿಲ್ಲಾ ನ್ಯಾಯಲಯವು ಏ 13ರ ವರೆಗೆ ಜಾಮೀನು ವಿಸ್ತರಣೆ ಮಾಡಿದೆ.

ಈ ನಡುವೆ ಕೊರ್ಟ್ ಆದೇಶ ಪ್ರಶ್ನಿಸಿ ಸೆಷನ್ಸ್ ನ್ಯಾಯಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಮೇಲ್ಮನವಿ ಅರ್ಜಿಯನ್ನು ಮೇ 3 ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.

ಸೋಮವಾರ ದೆಹಲಿಯಿಂದ ಸಹೋದರಿ ಪ್ರಿಯಾಂಕಾ ಗಾಂಧಿಯೊಂದಿಗೆ ಹೊರಟ ರಾಹುಲ್ ಗಾಂಧಿ ಮಧ್ಯಾಹ್ನ ವೇಳೆಗೆ ಸೂರತ್ ತಲುಪಿ ಕೋರ್ಟ್ ಮುಂದೆ ಹಾಜರಾದರು.

ಜಿಲ್ಲಾ ನ್ಯಾಯಲಯ ನೀಡಿದ ಆದೇಶ ರದ್ದು ಮಾಡಬೇಕು, ವಿಚಾರಣೆ ಅಂತ್ಯವಾಗುವವರೆಗೂ ಮಧ್ಯಂತರ ತಡೆ ನೀಡಬೇಕು ಎಂದು ರಾಗಾ ಪರ ವಕೀಲರು ಮನವಿ ಮಾಡಿದರು.

ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಲಯ ಮೇ 3 ರಂದು ವಿಚಾರಣೆ ನಡೆಸಲಾಗುವುದು, ಏಪ್ರಿಲ್ 13ರ ವರೆಗೂ ಜಾಮೀನು ವಿಸ್ತರಿಸಿದೆ ಎಂದು ತಿಳಿಸಿತು.

ರಾಹುಲ್ ಗಾಂಧಿ ವಿಚಾರಣೆ ಹಿನ್ನೆಲೆ ಸಾವಿರಾರು ಕಾರ್ಯಕರ್ತರು ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದರು.ಇದನ್ನು ಓದಿ –ಬೆಂಗಳೂರಿನಲ್ಲಿ ಅಗ್ನಿ ದುರಂತ – 8 ಮಂದಿ ದಹನ

ರಾಹುಲ್ ಗಾಂಧಿ ವಿಚಾರಣೆ ವೇಳೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸೇರಿದಂತೆ ಇತರ ಹಿರಿಯ ಕಾಂಗ್ರೆಸ್ ನಾಯಕರು ಸೆಷನ್ಸ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.

Share This Article
Leave a comment