ಜೊತೆ ಜೊತೆಯಲಿ ಸೀರಿಯಲ್ನ ನಟ ಅನಿರುದ್ಧ್ ಹಾಗೂ ನಿರ್ಮಾಪಕರ ಮಧ್ಯೆ ಮನಸ್ತಾಪ ತಾರಕಕ್ಕೇರಿದೆ.
ಕಿರುತೆರೆಯಿಂದ ಅನಿರುದ್ಧ್ ಅವರನ್ನು ಎರಡೂ ವರ್ಷ ಬಹಿಷ್ಕಾರಿಸಲು ಕಿರುತೆರೆ ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ.
ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಮಾಹಿತಿ ನೀಡಿ ಅನಿರುದ್ಧ್ ಅವರನ್ನು ಬ್ಯಾನ್ ಮಾಡಿಲ್ಲ. ಆದರೆ ಅವರನ್ನು ಎರಡು ವರ್ಷ ಕಿರುತೆರೆಯಿಂದ ದೂರ ಇಡುತ್ತಿದ್ದೇವೆ.
ಏಕೆಂದರೆ ಅನಿರುದ್ಧ್ ಅವರು ಜೊತೆ ಜೊತೆಯಲಿ ಸೀರಿಯಲ್ನ ನಿರ್ದೇಶಕ ಮಧು ಉತ್ತಮ್ ಅವರಿಗೆ ಮೂರ್ಖ ಅಂತ ಕರೆದಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ನಿರ್ದೇಶಕರಿಗೆ ನಿಂದಿಸಿ ಶೂಟಿಂಗ್ ಸೆಟ್ ನಿಂದ ಹೊರ ಹೋಗಿದ್ದಾರೆ ಎಂದರು.
ಧಾರಾವಾಹಿ ದೃಶ್ಯ ಬದಲಾವಣೆ ಮಾಡುವಂತೆ ನಿರ್ದೇಶಕ ಮಧು ಉತ್ತಮ್ ಜೊತೆ ಅನಿರುದ್ಧ್ ಕಿರಿಕ್ ಮಾಡಿದ್ದಾರೆ.
ಜಗದೀಶ್ ಅವರಿಗೆ ಆಗಿರುವ ಅನುಭವ ನಮಗೆ ಆಗಬಾರದು ಅಂತ ನಾವು ಈ ನಿರ್ಧಾರ ಮಾಡಿದ್ದೇವೆ ಅಷ್ಟೇ. ಹಲವು ಭಾರೀ ಜಗಳ ಆಡಿ ಶೂಟಿಂಗ್ ಸೆಟ್ನಿಂದ ಅನಿರುದ್ಧ್ ಹೊರ ನಡೆಸಿದ್ದಾರೆ. ಕಳೆದ ಎರಡು ದಿನದ ಹಿಂದೆ ಕೂಡ ಧಾರಾವಾಹಿ ತಂಡದ ಜೊತೆ ಜಗಳ ಮಾಡಿಕೊಂಡು ಶೂಟಿಂಗ್ ಮಾಡದೇ ಹೊರ ನಡೆದಿದ್ದರು. ಇದನ್ನು ಸಹಿಸಿ ಸಹಿಸಿ ಸಾಕಾಗಿದೆ.
ಹಲವು ಭಾರೀ ಈ ಘಟನೆ ಆಗಿದೆ ಅಂತ ಈ ನಿರ್ಧಾರ ಮಾಡಿದ್ದೇವೆ. ಪದೇ ಪದೇ ಹೀಗೆ ಆಗೋದನ್ನು ಸಹಿಸದೇ ಜೊತೆ ಜೊತೆಯಲಿ ತಂಡ ಧಾರವಾಹಿಯಿಂದ ಕೈ ಬಿಡಲು ನಿರ್ಧರಿಸಿದೆ ಎಂದು ಹೇಳಿದರು
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ