ಪ್ರಧಾನಿ ಭದ್ರತಾ ಲೋಪ ಪ್ರಕರಣ :ಸ್ಫೋಟಕ ದೃಶ್ಯಗಳು ಬಹಿರಂಗ

Team Newsnap
1 Min Read

ಪಂಜಾಬ್​ನಲ್ಲಿ ಪ್ರಧಾನಿ ಮೋದಿಯ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ದೃಶ್ಯ ಬಹಿರಂಗವಾಗಿವೆ, ರೈತ ಸಂಘಟನೆ ಕಾರ್ಯಕರ್ತರು ರಸ್ತೆಗೆ ಬಂದು ಪ್ರತಿಭಟನೆ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

ಪ್ರಧಾನಿ ತೆರಳುತ್ತಿದ್ದ ಬೆಂಗಾವಲು ಪಡೆಗೆ ಪ್ರತಿಭಟನಾಕಾರರು ಅಡ್ಡ ಬಂದು ತಡೆ ಉಂಟು ಮಾಡಿದ ಪ್ರಮಾಣ ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಕಾರು ನಿಂತಿತ್ತು.

ಕಾರಿನಲ್ಲಿಯೇ 20 ನಿಮಿಷ ಪ್ರಧಾನಿ ಮೋದಿ ಕಾದು ಕುಳಿತ್ತಿದ್ದರು. ಸುತ್ತಲೂ ಎನ್​​ಎಸ್​​​ಜಿ ಪಡೆಯ ಕಮಾಂಡರ್​​ಗಳು ವಾಹನವನ್ನು ಸುತ್ತವರೆಗೂ ಪ್ರಧಾನಿಗಳಿಗೆ ರಕ್ಷಣೆ ನೀಡುವ ಕಾರ್ಯ ಮಾಡುತ್ತಿದ್ದರು. ಈ ವೇಳೆ ಬ್ರಿಡ್ಜ್​ ಮೇಲೆ ಬೇರೆ ಬೇರೆ ವಾಹನಗಳು ಪ್ರಧಾನಿಗಳ ಬೆಂಗಾವಲು ವಾಹನ ಎದುರು ನಿಂತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.

ಈ ಘಟನೆ ಕುರಿತಂತೆ ಈಗಾಗಲೇ ಸಿಖ್​ ಫರ್ ಜಸ್ಟಿಸ್​ ಸಂಘಟನೆ ಪ್ರತಿಕ್ರಿಯೆ ನೀಡಿ, ಪಂಜಾಬ್​ ಪೊಲೀಸರಿಂದಲೇ ನಮಗೇ ಮೋದಿ ಆಗಮಿಸುತ್ತಿರೋ ಮಾಹಿತಿ ಲಭ್ಯವಾಗಿತ್ತು ಎಂದಿದ್ದಾರೆ.

ಈ ಹೇಳಿಕೆಯ ಬೆನ್ನಲ್ಲೂ ಪಂಜಾಬ್ ಸರ್ಕಾರ ಘಟನೆಗೆ ಕಾರಣವಾದ ವ್ಯಾಪ್ತಿಗಳ ಮೇಲೆ ಇದುವರೆಗೂ ಯಾವುದೇ ಕ್ರಮಕೈಗೊಳ್ಳದಿರುವುದು ಸಾಕಷ್ಟು ಪ್ರಶ್ನೆಗಳನ್ನು ಮೂಡಿಸಿದೆ.

ಕೇಂದ್ರಗೃಹ ಇಲಾಖೆ ಅಧಿಕಾರಿಗಳು ಫಿರೋಜ್​​​​​​ಪುರ ಫ್ಲೈಓವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೇಂದ್ರದ ಮೂವರು ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದ್ದು ಆ ದಿನ ಏನಾಯ್ತು ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯ ಮಾಡುತ್ತಿದ್ದಾರೆ.

Share This Article
Leave a comment