ಗುಜರಾತ್ ನ ಸೂರತ್ ನಲ್ಲಿ ತಪತಿ ನದಿ ದಂಡೆಯಲ್ಲಿರುವ ನೈಸರ್ಗಿಕ ತೈಲ ಮತ್ತು ಅನಿಲ ನಿಗಮ(ONGC)ದ ಹಾಜಿರಾ ಘಟಕದಲ್ಲಿ ನಿನ್ನೆ ರಾತ್ರಿ ೨:೩೦ ರ ಸುಮಾರು ಭಾರೀ ಸ್ಪೋಟ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಚಾಚಿಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಸ್ಪೋಟದ ಸದ್ದು ಸುಮಾರು ೪ ಕಿಮೀ ವರೆಗೂ ಕೇಳಿಸಿತ್ತು. ಅನಿಲದ ವಾಸನೆ ಸುಮಾರು ೧೦ ಕಿಮಿ ಸುತ್ತಲೂ ಪಸರಿಸಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಹಾಜಿರಾ ಘಟಕದ ONGCಯ ೨೪೦ ಕಿಮಿ ಉದ್ದದ ಪೈಪ್ ಲೈನ್ ಬಾಂಬೆ ಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನೀಡಿರುವ ಸೂರತ್ ನ ಜಿಲ್ಲಾಧಿಕಾರಿ ಡಾ.ಧವಲ್ ಪಟೇಲ್ ‘ಸೂರತ್ ನ ನೈಸರ್ಗಿಕ ತೈಲ ಮತ್ತು ಅನಿಲ ನಿಗಮದ ಹಾಜಿರಾ ಘಟಕದಲ್ಲಿ ಮೇಲಿಂದ ಮೇಲೆ ಮೂರು ಸ್ಫೋಟಗಳು ಸಂಭವಿಸಿವೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಈ ವರೆಗೂ ಯಾವುದೇ ಸಾವು-ನೋವಿನ ಪ್ರಕರಣ ಕಂಡುಬಂದಿಲ್ಲ’ ಎಂದು ಹೇಳಿದರು.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ