November 15, 2024

Newsnap Kannada

The World at your finger tips!

WhatsApp Image 2022 09 16 at 4.50.09 PM

ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕ್ಷಿಪ್ರಗತಿಯಲ್ಲಿ ಕಾರ್ಯಗತ ಮಾಡಿ – ಸಂಸದೆ ಸುಮಲತಾ ಅಧಿಕಾರಿಗಳಿಗೆ ತಾಕೀತು

Spread the love

ಜಿಲ್ಲೆಯನ್ನು ಎಲ್ಲಾ ವಿಭಾಗದಲ್ಲಿಯೂ ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಅಭಿವೃದ್ಧಿ ಕಾರ್ಯಗಳು ಬಹಳ ಮುಖ್ಯ. ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಲು ಶ್ರಮಿಸಿ ಎಂದು ಅಧಿಕಾರಿಗಳಿಗೆ ಸಂಸದೆ ಸುಮಲತಾ ಅಧಿಕಾರಿಗಳಿಗೆ ಶುಕ್ರವಾರ ತಾಕೀತು ಮಾಡಿದರು

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಗಳಿಂದ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಶಾಶ್ವತ ಆಸ್ತಿಗಳನ್ನು ಮಾಡಬಹುದು. ಜಿಲ್ಲೆಯ ಸರ್ಕಾರಿ ಶಾಲಗೆಳಲ್ಲಿ ಕಾಂಪೌಂಡ್, ಆಟದ ಮೈದಾನ, ಶೌಚಾಲಯ ಮುಂತಾದ ಕೆಲಸಗಳನ್ನು ಕೈಗೊಳ್ಳಬಹುದು. ನರೇಗಾ ಕಲಸಗಳನ್ನು ಚುರುಕುಗೊಳಿಸಿ ಎಂದರು.

20 ಲಕ್ಷ ರು ದಂಡ ವಸೂಲಿ :

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪದ್ಮಜಾ ಮಾತನಾಡಿ ಜಿಲ್ಲೆಯಲ್ಲಿ ಮರಳು, ಅಕ್ರಮ ಸಾಗಾಣಿಕೆಯಲ್ಲಿ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ 43 ಪ್ರಕರಣಗಳು ದಾಖಲಾಗಿವೆ, 66 ಲಾರಿಗಳನ್ನು ವಶಕ್ಕೆ ತೆಗೆದುಕೊಂಡು 20ಲಕ್ಷ ರು ದಂಡವನ್ನು ವಸೂಲು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ರಜೆ ದಿನಗಳಲ್ಲೂ ಆಸ್ಪತ್ರೆ ತೆರೆಯಿರಿ :

ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸಾರ್ವತ್ರಿಕ ರಜೆಯ ವೇಳೆಯಲ್ಲೂ ಕೆಲಸ ನಿರ್ವಹಿಸಿದರೆ ಉತ್ತಮ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರುವಂತಹ ಕುಂದು ಕೊರತೆಗಳನ್ನು ಬಗೆಹರಿಸಿ ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು

ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ಅನೇಕ ಶಾಲೆಗಳು ಹಾನಿಯಾಗಿದೆ.ಅವುಗಳನ್ನು ಸರಿಪಡಿಸುವ ಕೆಲಸಗಳು ನಡೆಯಬೇಕು ಹಾಗೂ ನರೇಗಾ ಯೋಜನೆಯಡಿ ಶಾಲೆಯ ಶೌಚಾಲಯ, ಕಾಂಪೌಂಡ್ ಸೇರಿದಂತೆ ಮೂಲ ಸೌಕರ್ಯವನ್ನು ಕಲ್ಪಿಸಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮದ್ದೂರಿನ ಅಂಬರಹಳ್ಳಿ ಸರ್ಕಾರಿ ಶಾಲೆ : ಹಲ್ಲಿ ಬಿದ್ದ ಬಿಸಿಊಟ ಮಾಡಿ 29 ಮಕ್ಕಳು ಅಸ್ವಸ್ಥ – ಪ್ರಾಣಾಪಾಯದಿಂದ

ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಸಮಯಕ್ಕೆ ಸರಿಯಾಗಿ ಸದ್ಭಳಕೆ ಮಾಡಬೇಕು. ಜಿಲ್ಲೆಯಲ್ಲಿ ಉತ್ತಮ ಕಾರ್ಯವನ್ನು ಮಾಡಲು ಸಹಕರಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಉಸ್ತುವಾರಿ ಕಾರ್ಯದರ್ಶಿಗಳಾದ ಜಯರಾಮ್‌ ರಾಯಪುರ ಅವರು ಮಾತನಾಡಿ ಜೆಜೆಎಂ ಅಭಿವೃದ್ದಿ ಕಾರ್ಯಗಳ ಕುರಿತು ಮಾಹಿತಿ ನೀಡಲು ತಾಲ್ಲೂಕು ಮಟ್ಟದ ಹಂತದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಸದರು ಮತ್ತು ಶಾಸಕರುಗಳನ್ನು ಆಹ್ವಾನಿಸಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ತಮ್ಮಣ್ಣ ರವರಿಗೆ ತಿಳಿಸಿದರು.

ಸಭೆಯಲ್ಲಿ ಮಂಡ್ಯ ಜಿ.ಪಂ. ಮುಖ್ಯಕಾರ್ಯನಿರ್ವಹಕಾಧಿಕಾರಿ ಶಾಂತ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು,ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!