November 1, 2024

Newsnap Kannada

The World at your finger tips!

budget , union , release

No need to pay income tax up to Rs 7.27 lakh: Union Finance Minister Nirmala 7.27 ಲಕ್ಷ ರು ತನಕ ಆದಾಯ ತೆರಿಗೆ ಪಾವತಿ ಅಗತ್ಯವಿಲ್ಲ

2021-22ರ ಕೇಂದ್ರ ಬಜೆಟ್ ನಲ್ಲಿನ‌ ನಿರೀಕ್ಷೆಗಳೇನು ?

Spread the love
  • ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆ
  • ಇದೇ ಮೊದಲ ಬಾರಿಗೆ ಬಜೆಟ್ ಆ್ಯಪ್ ಮೂಲಕ‌ ಬಿಡುಗಡೆ
  • ಮೋದಿ ಸರ್ಕಾರದ 9 ನೇ ಬಜೆಟ್ ಇದು.
  • ನಿರ್ಮಲಾ ಸೀತಾರಾಮನ್ 3 ನೇ ಬಜೆಟ್ ಮಂಡಿಸುತ್ತಿದ್ದಾರೆ.
  • ವ್ಯಾಕ್ಸಿನ್, ಆತ್ಮ ನಿರ್ಭರ ಭಾರತ, ಕೃಷಿ, ಆಮದು ಸುಂಕ – ತೆರಿಗೆ ಹಾಗೂ ಖಾಸಗಿಕರಣ – ಇವು ಬಜೆಟ್ ನ ಪಂಚ್ ಪ್ಲಾನ್ ಗಳು.

ವಿಶ್ವದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೊರೊನಾ ಮಹಾಮಾರಿ, ಹಲವು ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸಿದ ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮಂಡಿಸುತ್ತಿರುವ ಕೇಂದ್ರ ಬಜೆಟ್​​​ ಮೇಲೆ ಇಡೀ ದೇಶದ ಜನರು ಅಪಾರ ನಿರೀಕ್ಷೆ ಇಟ್ಟು ಕೊಂಡಿದ್ದಾರೆ.

ದೇಶದ ಆರ್ಥಿಕತೆಯನ್ನು ಮೇಲೆತ್ತಲು,
ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉದ್ಯೋಗಗಳ ಸೃಷ್ಟಿಗೆ ಯೋಜನೆಗಳನ್ನು ರೂಪಿಸುವ ನಿರೀಕ್ಷೆ ಇದೆ.

ಬಜೆಟ್ ನಿರೀಕ್ಷೆಗಳ ಸ್ಥೂಲ ಪರಿಚಯ:

  • ರಿಯಲ್​​ ಎಸ್ಟೇಟ್​​ ಉದ್ಯಮ ಉತ್ತೇಜನಕ್ಕೆ ತೆರಿಗೆಯಲ್ಲಿ ವಿನಾಯಿತಿ ನೀಡಬಹುದು.
  • ಮೂಲ ಸೌಕರ್ಯ, ಆರೋಗ್ಯ ಸೇವೆ, ರಕ್ಷಣಾ ಕ್ಷೇತ್ರಗಳಿಗೆ ಆದ್ಯತೆ ನೀಡಬಹುದು.
  • ಆದಾಯ ತೆರಿಗೆ ಕಾಯ್ದೆಯಲ್ಲಿ ಸಡಿಲಿಕೆ ತಂದು ಬಂಡವಾಳ ಹೂಡಿಕೆಗೆ ಪ್ರೋತ್ಸಾಹಕ್ಕೆ ಅನುವು
  • ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸರಳ ನಿಯಮಗಳನ್ನು ರೂಪಿಸಬಹುದು.
  • ಆರ್ಥಿಕ, ಗಣಿಗಾರಿಕೆ, ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣ, ಭಾರತೀಯ ಜೀವವಿಮಾ ಕಂಪನಿಯಂತಹ ಬೃಹತ್ ಕಂಪನಿಗಳ ಅಲ್ಪ ಪ್ರಮಾಣದ ಪಾಲನ್ನು ಕೇಂದ್ರ ಮಾರಾಟಕ್ಕೆ ಮುಂದಾಗಬಹುದು.
  • ಸರ್ಕಾರ 4 ಸಾವಿರ ಕೋಟಿ ಡಾಲರ್ ಸಂಗ್ರಹದ ಗುರಿ ಹಾಕಿಕೊಂಡಿದೆ.
  • 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಗುರಿ ಹಾಕಿಕೊಂಡಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಆಶಾಭಾವ ಹೊಂದಿದೆ.
  • ಎಂಎಸ್​​ಪಿ ಬಾಕಿ ಬಗ್ಗೆಯೂ ಸರ್ಕಾರ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.
  • ರೈತ ಸಮ್ಮಾನ್‌ ಯೋಜನೆಯ ಮೊತ್ತವನ್ನ ಹೆಚ್ಚಿಸುವ ಸಾಧ್ಯತೆ ಇದೆ.
  • ತೈಲ ಬೆಲೆ, ಅಡುಗೆ ಎಣ್ಣೆ ಬೆಲೆ ಅಂಕುಶವಿಲ್ಲದೆ ದರ ಏರಿಕೆ ಆಗುತ್ತಿದೆ ಕಡಿವಾಣ ಹಾಕುವ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳುತ್ತಾ ನೋಡಬೇಕಿದೆ.
Copyright © All rights reserved Newsnap | Newsever by AF themes.
error: Content is protected !!