ಅ.16 ರ CWC ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧಿಪತಿ ಆಯ್ಕೆಯ ನಿರೀಕ್ಷೆ

Team Newsnap
1 Min Read

ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಅ. 16 ರಂದು ನಡೆಯಲಿರುವ ಕಾಂಗ್ರೆಸ್ ನ CWC ಸಮಾವೇಶದಲ್ಲಿ ಕಾಂಗ್ರೆಸ್​ ಪಕ್ಷದ ಹೊಸ ಅಧ್ಯಕ್ಷರ ಆಯ್ಕೆ ಕುರಿತಂತೆ ಪ್ರಮುಖ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ. ಆ ಮೂಲಕ ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಬಹುದು.

CWC ಸಭೆ ಕರೆಯುತ್ತಿದಂತೆ ಕಾಂಗ್ರೆಸ್​ ಪಕ್ಷದ ಪ್ರಮುಖ ನಾಯಕರು, ಗಾಂಧಿ ಕುಟುಂಬದ ಆಪ್ತ ನಾಯಕರು ಸೋನಿಯಾಗಾಂಧಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಈ ವೇಳೆ ರಾಹುಲ್ ಗಾಂಧೀ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವು ಹಿರಿಯ ನಾಯಕರು ರಾಹುಲ್ ಗಾಂಧಿ ಅಧ್ಯಕ್ಷರಾದರೆ, 2024 ರಲ್ಲೂ ಕಾಂಗ್ರೆಸ್​ ಅಧಿಕಾರ ಹಿಡಿಯೋದು ಕನಸು ಎಂದು ಬೇಸರ ವ್ಯಕ್ತಪಡಿಸಿದ್ದಾರಂತೆ.

CWC ಸಭೆ ನಿಗದಿಯಾದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರ ಬಗ್ಗೆ ಎಲ್ಲರ ಚಿತ್ತ ಅಧ್ಯಕ್ಷ ಸ್ಥಾನದತ್ತ ನೆಟ್ಟಿದೆ.

ಇದೇ ವೇಳೆ ಮುಂಬರುವ ಪಂಚರಾಜ್ಯಗಳ ಚುನಾವಣೆಯ ವಿಚಾರ ಹಾಗೂ ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

Share This Article
Leave a comment