November 15, 2024

Newsnap Kannada

The World at your finger tips!

Pakistan

ಭಾರತ ಹೊಗಳಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಸಾಧ್ಯತೆ

Spread the love

ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಂಧನ ಭೀತಿ ಎದುರಾಗಿದೆ

ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ನೀಡಿದ್ದ ಎರಡೂ ನೋಟಿಸ್ ಗೆ ಉತ್ತರಿಸಿದ ಕಾರಣ ಅವರನ್ನು ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಬಂಧಿಸುವ ಸಾಧ್ಯತೆ ಇದೆ.ಇದನ್ನು ಓದಿ –‘ಜೊತೆ ಜೊತೆಯಲಿ ‘ ನಾಯಕನಿಗೆ ಗೇಟ್​ಪಾಸ್​: ಮನದ ನೋವು ಬಹಿರಂಗ ಮಾಡಿದ ಅನಿರುದ್ಧ್​

ಶುಕ್ರವಾರ ಈ ಸಂಸ್ಥೆ ಇಮ್ರಾನ್ ಖಾನ್ ಅವರಿಗೆ 2ನೇ ನೋಟಿಸ್ ಜಾರಿ ಮಾಡಿದೆ, ಇದಕ್ಕೆ ಉತ್ತರಿಸದೇ ಇದ್ದರೆ ಇಮ್ರಾನ್ ಖಾನ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಮ್ರಾನ್ ಖಾನ್ ಅವರನ್ನು ಬಂಧಿಸುವ ಅಂತಿಮ ನಿರ್ಧಾರವನ್ನು ಮೂರು ನೋಟಿಸ್‌ಗಳನ್ನು ನೀಡಿದ ನಂತರ ತೆಗೆದುಕೊಳ್ಳಬಹುದು ಎಂದು ಎಫ್‌ಐಎಯಲ್ಲಿನ ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಬಂಧನ ಭೀತಿ ಏಕೆ?


ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಮತ್ತು ಬೆಲ್ಜಿಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಮ್ರಾನ್ ಖಾನ್ ಅವರ ಪಕ್ಷಕ್ಕೆ ಸಂಬಂಧಿಸಿದ ಐದು ಕಂಪನಿಗಳನ್ನು ಎಫ್‌ಐಎ ಪತ್ತೆಹಚ್ಚಿದ್ದು, ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ (ಇಸಿಪಿ) ಸಲ್ಲಿಸಿದ ವರದಿಗಳಲ್ಲಿ ಅವುಗಳನ್ನು ಉಲ್ಲೇಖಿಸಲಾಗಿಲ್ಲ. ಹೀಗಾಗಿ ಇದು ಭ್ರಷ್ಟಾಚಾರ ಕಾಯ್ದೆಯಡಿಯಲ್ಲಿ ಬರುತ್ತದೆ ಎನ್ನಲಾಗಿದೆ.

ನಿಷೇಧಿತ ಧನಸಹಾಯ ಪ್ರಕರಣದಲ್ಲಿ ತನಗೆ ಕಳುಹಿಸಲಾದ ನೋಟಿಸ್ ಅನ್ನು ಎರಡು ದಿನಗಳಲ್ಲಿ ಹಿಂಪಡೆಯುವಂತೆ ಖಾನ್ ಬುಧವಾರ ಎಫ್‌ಐಎಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ನಿಮಗೆ ಉತ್ತರಿಸಲು ನಾನು ಜವಾಬ್ದಾರನಲ್ಲ ಅಥವಾ ನಿಮಗೆ ಮಾಹಿತಿಯನ್ನು ಒದಗಿಸುವ ಹೊಣೆಗಾರಿಕೆ ನನ್ನದಲ್ಲ. ಎರಡು ದಿನಗಳಲ್ಲಿ ನೋಟಿಸ್ ವಾಪಸ್ ಪಡೆಯದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಉನ್ನತ ತನಿಖಾ ಸಂಸ್ಥೆಗೆ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!