ತಿಂಗಳಿಗೆ 2 ರೂ. ಸಂಬಳ, 4.74 ರೂ. ಪಡಿತರ – ಮುಜರಾಯಿ ಇಲಾಖೆ ದೇವಸ್ಥಾನದ ಅರ್ಚಕರ ಸ್ಥಿತಿ

Team Newsnap
1 Min Read
2rs per month , 4.74 Rs. Ration – Mujarai Temple Priests salary ತಿಂಗಳಿಗೆ 2 ರೂ. ಸಂಬಳ, 4.74 ರೂ. ಪಡಿತರ – ಮುಜರಾಯಿ ಇಲಾಖೆ ದೇವಸ್ಥಾನದ ಅರ್ಚಕರ ಸ್ಥಿತಿ

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಿ ಗ್ರೇಡ್ ದೇವಾಲಯದ ಅರ್ಚಕರ ತಿಂಗಳ ಸಂಬಳ ಕೇವಲ 2.50 ಪೈಸೆ ಮಾತ್ರ.

ಶನಿವಾರ ಉಪ ಲೋಕಾಯುಕ್ತ ನ್ಯಾ ಕೆ.ಎನ್.ಫಣೀಂದ್ರ ಚಾಮರಾಜನಗರದ ಹೊರವಲಯದಲ್ಲಿರುವ ಹರಳುಕೋಟೆಯ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ದಿಢೀರ್ ಭೇಟಿ ನೀಡಿದರು.ಇದನ್ನು ಓದಿ –ಭಾರತ ಹೊಗಳಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಸಾಧ್ಯತೆ

ಈ ವೇಳೆ ಅರ್ಚಕ ಅನಂತ ಪ್ರಸಾದ್ ತಮ್ಮ ಸಂಕಷ್ಟವನ್ನು ತೋಡಿಕೊಂಡರು. ನಮಗೆ ನಮ್ಮ ತಂದೆ ಕಾಲದಿಂದಲೂ ತಿಂಗಳಿಗೆ ಕೇವಲ 2.50 ಪೈಸೆ ಸಂಬಳ, ಪಡಿತರಕ್ಕೆ 4.74 ಪೈಸೆ ಬರುತ್ತದೆ. ಇದರಿಂದ ಜೀವನ ನಿರ್ವಹಣೆ ಮಾಡಲು ಕಷ್ಟ. ಇನ್ನು ಮುಂದಾದರೂ ನಮ್ಮ ಸಿ ಗ್ರೇಡ್ ದೇವಾಲಯದ ಅರ್ಚಕರ ಸಂಬಳ ಜಾಸ್ತಿ ಮಾಡಿಸುವಂತೆ ಮನವಿ ಮಾಡಿಕೊಂಡರು.

ದೇವಾಲಯದ ಪಡಿತರಕ್ಕಾಗಿ ತಿಂಗಳಿಗೆ 4.74 ಪೈಸೆ ನೀಡಲಾಗುತ್ತದೆ. ಈ ಹಣದಲ್ಲಿ ಒಂದು ದಿನದ ಎಣ್ಣೆ ಬತ್ತಿಗೂ ಸಾಲುವುದಿಲ್ಲ. 5 ವರ್ಷದಿಂದ ಅರ್ಚಕರಿಗೆ ಸಂಬಳ ಬಂದಿಲ್ಲ ಎಂದರು. ಇದನ್ನೆಲ್ಲಾ ಕೇಳಿಸಿಕೊಂಡ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಒಂದು ಕ್ಷಣ ತಬ್ಬಿಬ್ಬಾದರು.

ಇಂತಹ ಮುಂದುವರಿದಿರುವ ಕಾಲದಲ್ಲೂ ಇಷ್ಟು ಕಡಿಮೆ ಸಂಬಳ ಅಂದ್ರೆ ಅವರ ಜೀವನ ಹೇಗೆ. ಪರಿಸ್ಥಿತಿ ಹೀಗಿದ್ರೂ ನಾವೆಲ್ಲಾ ಏನು ಮಾಡುತ್ತಿದ್ದೇವೆ ಎಂದು ಬೇಸರಗೊಂಡ ಉಪಲೋಕಾಯುಕ್ತರು 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

Share This Article
Leave a comment