ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಧೃವೀಕರಣ ಆರಂಭವಾಗಿದೆ ಎಂಬುದರ ದ್ಯೋತಕವಾಗಿ ಕಾಂಗ್ರೆಸ್ ಹಿರಿಯ ನಾಯಕರನ್ನು ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಜೆಡಿಎಸ್ ಫಲಪ್ರದವಾಗುವ ಹಂತಕ್ಕೆ ಬಂದಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಂಡ್ಯದಿಂದಲೇ ಪಕ್ಷ ಸಂಘಟನೆಯ ಬೇರುಗಳನ್ನು ಬಲಪಡಿಸಲು ತಂತ್ರಗಾರಿಕೆ ಆರಂಭಿಸಿದ್ದಾರೆಂದು ಹೇಳಲಾಗಿದೆ
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಅನೇಕ ನಾಯಕರುಗಳನ್ನು ಸೆಳೆದುಕೊಳ್ಳುವ ಪ್ರಯತ್ನ ಸಾಗಿದೆ ಎಂಬ ಇಬ್ರಾಹಿಂ ಹೇಳಿಕೆಯ ಬೆನ್ನಲ್ಲೇ ಮಾಜಿ ಸಚಿವ, ಮಂಡ್ಯ ರಾಜಕಾರಣದ ಪ್ರಭಾವಿ ಕುಟುಂಬ ನಾಯಕ ಎಂ ಎಸ್ ಆತ್ಮಾನಂದ ಅವರನ್ನು ಸೆಳೆದುಕೊಳ್ಳಲು ಇಬ್ರಾಹಿಂ ಗಾಳ ಹಾಕಿದ್ದಾರೆ.
ಇಬ್ರಾಹಿಂ ಹಾಗೂ ಆತ್ಮನಂದ ಅವರು ಸಮಕಾಲಿನರಾಗಿಯೇ ರಾಜಕಾರಣ ಆರಂಭಿಸಿ ಶಾಸಕರಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹಳೆ ಗೆಳತನ ವಿಶ್ವಾಸ ಹಾಗೂ ಕಾಂಗ್ರೆಸ್ ನಲ್ಲಿ ಆತ್ಮಾನಂದ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ಅಂಶಗಳನ್ನು ಗಮನಿಸಿದ ಇಬ್ರಾಹಿಂ , ಆತ್ಮಾನಂದ ಅವರನ್ನು ಜೆಡಿಎಸ್ ಸೇರಿಸಿಕೊಂಡು ಪಕ್ಷ ಸಂಘಟನೆ ಜವಾಬ್ದಾರಿ ನೀಡಲು ಬಯಸಿದ್ದಾರೆ ಎಂದು ಗೊತ್ತಾಗಿದೆ
ಮಂಡ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನೂ ಕೆಲವು ಮುಖಂಡರು ಜೆಡಿಎಸ್ ಗೆ ಸೇರ್ಪಡೆಯಗುವ ಸಾಧ್ಯತೆಗಳಿವೆ
ಜೆಡಿಎಸ್ ಸೇರ್ಪಡೆ ಕುರಿತಂತೆ ನ್ಯೂಸ್ ಸ್ನ್ಯಾಪ್ ಡಿಜಿಟಲ್ ಮಿಡಿಯಾಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಆತ್ಮಾನಂದ, ನಾನು , ಇಬ್ರಾಹಿಂ ಸ್ನೇಹಿತರು. ನನ್ನನ್ನು ಸಂಪರ್ಕ ಮಾಡಿದ್ದರು ನಿಜ. ಆದರೆ ಸದ್ಯಕ್ಕೆ ಯಾವುದೇ ಆಲೋಚನೆ ಮಾಡಿಲ್ಲ ಮತ್ತು ಇವೆಲ್ಲವೂ ಏಕಾಏಕಿ ನಿರ್ಧಾರ ಕೈಗೊಳ್ಳುವ ವಿಷಯವೂ ಅಲ್ಲ. ಕಾದು ನೋಡಿ ಎಂದಷ್ಟೇ ಹೇಳಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು