January 5, 2025

Newsnap Kannada

The World at your finger tips!

DCM,accident,Politician

Ex-DCM Laxman Savadi's car overturns ಮಾಜಿ DCM ಲಕ್ಷ್ಮಣ್ ಸವದಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ: ಪ್ರಾಣಾಪಾಯದಿಂದ ಪಾರು, ಗಾಯ - ಸ್ಥಳೀಯರ ನೆರವು

ಮಾಜಿ DCM ಲಕ್ಷ್ಮಣ್ ಸವದಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ: ಪ್ರಾಣಾಪಾಯದಿಂದ ಪಾರು, ಗಾಯ – ಸ್ಥಳೀಯರ ನೆರವು

Spread the love

ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಬೆಳಗಾವಿ ಬಳಿ ಅಪಘಾತಕ್ಕೆ ಇಡಾಗಿದೆ ಸವದಿ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಯಭಾಗ ತಾಲೂಕಿನ ಹಾರೋಗೇರಿ- ಹಿಡಕಲ್ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ.ಇದನ್ನು ಓದಿ –ಕಾಂಗ್ರೆಸ್ ಪಕ್ಷಕ್ಕೆ ಮಾಜಿ M L C ಎಂ.ಡಿ ಲಕ್ಷ್ಮೀನಾರಾಯಣ ಗುಡ್ ಬೈ – B J P ಗೆ ಸೇರ್ಪಡೆಗೆ ತಯಾರಿ

ಹಿಡಕಲ್ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವದಿ ಪ್ರಯಾಣಿಸುತ್ತಿರುವ ಕಾರಿಗೆ ಬೈಕ್​ ಅಡ್ಡ ಬಂದಿದೆ. ಬೈಕ್​ ನೋಡಿದ ಲಕ್ಷ್ಮಣ್  ಸವದಿ ಕಾರು ಚಾಲಕ, ಅನಾಹುತವನ್ನು ತಪ್ಪಿಸಲು ಮುಂದಾಗಿದ್ದಾರೆ.


ಈ ವೇಳೆ ನಿಯಂತ್ರಣ ತಪ್ಪಿದ ಕಾರು, ಘಟಪ್ರಭಾ ಎಡದಂಡೆ ಕಾಲುವೆಗೆ ಪಲ್ಟಿ ಹೊಡೆದಿದೆ. 

ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ, ಕಾರಿನೊಳಗೆ ಸಿಲುಕಿದ್ದ ಲಕ್ಷ್ಮಣ ಸವದಿ ಅವರನ್ನು ರಕ್ಷಿಸಿದ್ದಾರೆ. ಅಪಘಾತ ಆಗುತ್ತಿದ್ದಂತೆಯೇ ಕಾರಿನ ಏರ್​ಬ್ಯಾಗ್​ ಓಪನ್ ಆಗಿದ್ದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!