March 11, 2026

Newsnap Kannada

The World at your finger tips!

WhatsApp Image 2022 07 14 at 8.35.54 AM

ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಪತಿ ಮಾರಣಾಂತಿಕ ಹಲ್ಲೆಯಿಂದ ಸಾವು

Spread the love

ಬೆಂಗಳೂರಿನಲ್ಲಿ ಕಳೆದ ರಾತ್ರಿ ಸಹೋದರನ ಮಕ್ಕಳಿಂದ ತೀವ್ರ ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೊರೇಟರ್ ಪತಿ ಆಯುಬ್ ಖಾನ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಬಿಬಿಎಂಪಿ 139 ವಾರ್ಡ್‍ನ ಮಾಜಿ ಕಾರ್ಪೋರೇಟರ್ ನಜೀಮಾ ಪತಿ ಆಯುಬ್ ಖಾನ್ ಮೇಲೆ ಸಹೋದರ ಹಾಗೂ ಆತನ ಮಕ್ಕಳು ಚಾಕು ಇರಿದು ಮನಸ್ಸೋ ಇಚ್ಛೆ ಥಳಿಸಿದ್ದರು. ಅಲ್ಲದೆ ಆಯುಬ್ ಸಹೋದರ ಹೊಟ್ಟೆ ಹಾಗೂ ಮೂತ್ರ ವಿಸರ್ಜನಾ ಸಂಚಿ ಭಾಗಕ್ಕೆ ಚಾಕುವಿನಿಂದ ಇರಿದಿದ್ದನು. ಚಾಕು ಇರಿದ ಜಾಗದಲ್ಲಿ ಸತತವಾಗಿ ರಕ್ತಸ್ರಾವವಾಗುತ್ತಿತ್ತು.

ಘಟನೆ ನಡೆದ ಕೂಡಲೇ ಆಯುಬ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆ ಬಳಿ ಆಯುಬ್ ಖಾನ್ ಸಂಬಂಧಿಕರು ಸೇರಿದ್ದಾರೆ.

error: Content is protected !!