January 11, 2025

Newsnap Kannada

The World at your finger tips!

sudhakar1

2 ನೇ ಡೋಸ್ ಪಡೆದರೂ 1 ವರ್ಷ ಮಾಸ್ಕ್ ಹಾಕಲೇಬೇಕು – ಸಚಿವ ಡಾ. ಸುಧಾಕರ್

Spread the love

2 ಡೋಸ್ ಲಸಿಕೆ​ ಪಡೆದವರು ಮಾಸ್ಕ್​​ ತಪ್ಪದೇ ಹಾಕಿ.‌ ಮುಂದಿನ 6 ತಿಂಗಳು ಅಥವಾ 1 ವರ್ಷದವರೆಗೆ ಎಲ್ಲರೂ ಮಾಸ್ಕ್ ಧರಿಸಿ. ಯಾರು ಎರಡು ಡೋಸ್ ಲಸಿಕೆ ಪಡೆದಿದ್ದೀರಾ, ಎಲ್ಲರಿಗೂ ಲಸಿಕೆ ಪ್ರಕ್ರಿಯೆ ಮುಗಿಯುವವರೆಗೂ, ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ‌ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಕಪ್ಪು ಫಂಗಸ್​ ಔಷಧಿ ವಿಚಾರದಲ್ಲಿ ಸದಾನಂದಗೌಡರು ಕೆಲಸ ಮಾಡುತ್ತಿದ್ದಾರೆ. ನಮಗೂ 8-10 ಸಾವಿರ ವಯಲ್ಸ್ ಪೂರೈಕೆ ಮಾಡಿದ್ದಾರೆ. ಫಂಗಸ್​​ನಿಂದ ಮೃತರಾದವರ ಡೆತ್ ಆಡಿಟ್ ಗೆ ಸೂಚನೆ ನೀಡಲಾಗಿದೆ. ಬ್ಲ್ಯಾಕ್​ ಫಂಗಸ್​​ನಿಂದ ರಾಜ್ಯದಲ್ಲಿ 30 ರಿಂದ 35 ಸಾವಾಗಿದೆ ಎಂದು ಎಂದರು.

ರಾಜ್ಯದಲ್ಲಿ ರೆಮ್​​ಡಿಸಿವಿರ್ ಕೊರತೆ ಇಲ್ಲ. ಹಲವು ಕಂಪನಿಗಳು ರೆಮ್​​ಡಿಸಿವಿರ್ ಕೊಡಲು ಮುಂದೆ ಬಂದಿವೆ. ಕೇಂದ್ರ ಸರ್ಕಾರ ಕೂಡ ರೆಮ್​​ಡಿಸಿವಿರ್ ವಿಚಾರದಲ್ಲಿ ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ  ಡಾ ಸುಧಾಕರ್ ಹೇಳಿದರು.

ಲಾಕ್​ಡೌನ್​ನಿಂದ ರಾಜ್ಯದಲ್ಲಿ‌ ಶೇ. 47ರಷ್ಟಿದ್ದ ಪಾಸಿಟಿವಿಟಿ ರೇಟ್​​ ಕಳೆದ 15 ದಿನಗಳಲ್ಲಿ 14-15ರಷ್ಟು ಇದೆ. ಮೊದಲು ಲಾಕ್​​ಡೌನ್ ಹೇರಿಕೆ ಮಾಡಿದ ರಾಜ್ಯಗಳಲ್ಲಿ ಶೇ. 8-9ರಷ್ಟಿದೆ. ತಾಂತ್ರಿಕ ಸಲಹಾ ಸಮಿತಿಯ ಜೊತೆ ಚರ್ಚೆ ಮಾಡಿ, ಅಂತಿಮವಾಗಿ ಸಿಎಂ ಲಾಕ್ಡೌನ್ ವಿಸ್ತರಣೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!