ಡ್ರೋನ್ ದಾಳಿಗಳನ್ನುತಡೆಯಲು ಕೇರಳದಲ್ಲಿ ಡ್ರೋನ್ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಕೇರಳ ಪೊಲೀಸ್ ಮುಖ್ಯಸ್ಥ, ಡಿಜಿಪಿ ಅನಿಲ್ ಕಾಂತ್ ಈ ಬಗ್ಗೆ ಮಾಹಿತಿ ನೀಡಿ, ಈಗಿನ ದಿನಗಳಲ್ಲಿ ಡ್ರೋನ್‌ಗಳು ಸುಲಭವಾಗಿ ಲಭ್ಯವಾಗುತ್ತಿವೆ. ಇದರಿಂದ ದೇಶದ ಭದ್ರತೆಗೆ ಹೆಚ್ಚಿನ ಸವಾಲು ಎದುರಾಗುತ್ತಿರುವ ಬಗ್ಗೆ ಸೇನಾ ಮುಖ್ಯಸ್ಥ ಎಂ.ಎಂ ನರಾವಣೆ ಮಾತನಾಡಿದ್ದರು. ಅದರ ಮರುದಿನವೇ ಕೇರಳದಲ್ಲಿ ಡ್ರೋನ್ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸುವ ಬಗ್ಗೆ ಘೋಷಿಸಲಾಗಿದೆ ಎಂದರು.
ಡ್ರೋನ್‌ಗಳಿಂದ ಎದುರಿಸುವ ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸಲು ಸಂಶೋಧನಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಹಯೋಗ ಮಾಡಿಕೊಳ್ಳುವ ಬಗ್ಗೆಯೂ ನಾವು ಪರಿಗಣಿಸಿದ್ದೇವೆ ಎಂದು ಅನಿಲ್ ಕಾಂತ್ ಹೇಳಿದ್ದಾರೆ.
ಸೆಕ್ಯೂರಿಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಾವು ಡ್ರೋನ್ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸುತ್ತೇವೆ. ಕೇರಳ ಪೊಲೀಸರ ಸೈಬರ್ಡೋಮ್ ಸಹಾಯದಿಂದ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸಂಶೋಧನಾ ವಲಯದಲ್ಲಿ ಕೇಂದ್ರ ಸರ್ಕಾರದೊಂದಿಗೂ ಸಹಯೋಗ ಮಾಡಿಕೊಳ್ಳಲು ಯೋಚಿಸಿದ್ದೇವೆ ಎಂದರು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ