October 4, 2024

Newsnap Kannada

The World at your finger tips!

turkey , president , politics

Erdogan is in power for the third time as the President of Turkey ಎರ್ಡೊಗನ್ ಟರ್ಕಿ ಅಧ್ಯಕ್ಷರಾಗಿ ಮೂರನೇ ಬಾರಿ  ಅಧಿಕಾರಕ್ಕೆ

ಎರ್ಡೊಗನ್ ಟರ್ಕಿ ಅಧ್ಯಕ್ಷರಾಗಿ ಮೂರನೇ ಬಾರಿ  ಅಧಿಕಾರಕ್ಕೆ

Spread the love

ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ದು, ಈ ಮೂಲಕ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಅಧ್ಯಕ್ಷೀಯ ಚುನಾವಣೆ ಮೇ 14 ರಂದು ನಡೆದಿದ್ದು , ಎರ್ಡೊಗನ್ ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್‍ಡರೊಗ್ಲ ಗೆಲುವಿಗೆ ಅಗತ್ಯವಿರುವ ಬಹುಮತ ಪಡೆಯಲಿಲ್ಲ.

ಭಾನುವಾರ ನಡೆದ  2 ನೇ ಸುತ್ತಿನ ಮತದಾನದಲ್ಲಿ ಎರ್ಡೋಗನ್ ಅವರು ವಿರೋಧ ಪಕ್ಷದ ನಾಯಕ ಕೆಮಲ್ ಕಿಲಿಕ್‍ಡರೊಗ್ಲು ಅವರನ್ನು ಸೋಲಿಸಿದರು .

ಈ ಮೂಲಕ ಭೀಕರ ಭೂಕಂಪ, ಹೆಚ್ಚಿದ ಹಣ ದುಬ್ಬರದ ಮಧ್ಯೆಯೂ ಎರ್ಡೊಗನ್ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ವಾಡ್ಲಿಮಿರ್‌ ಪುಟಿನ್‌ ಸೇರಿದಂತೆ ಗಣ್ಯರು ಎರ್ಡೊಗನ್‌ ಅವರಿಗೆ ಶುಭಹಾರೈಸಿದ್ದಾರೆ.5 ಗ್ಯಾರಂಟಿ `ಬ್ಲೂಪ್ರಿಂಟ್’ ಸಿದ್ದವಾಗುತಿದ್ದೆ: ಡಿಸಿಎಂ

20 ವರ್ಷಗಳಿಂದ ಈ ಸ್ಥಾನದ ಮೇಲಿದ್ದ ಅವರ ಹಿಡಿತ ಮೂರನೇ ದಶಕಕ್ಕೂ ಮುಂದುವರಿದಂತಿದೆ. 2017ರಲ್ಲಿ ಏಪ್ರಿಲ್‍ನಲ್ಲಿ ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ನೂತನ ಸಂವಿಧಾನದ ಪ್ರಕಾರ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.




Copyright © All rights reserved Newsnap | Newsever by AF themes.
error: Content is protected !!