ಭಾರತ – ಚೀನಾದ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ. ಬದಲಾಗಿ ಸಂಘರ್ಷ ಗಂಭಿರ ರೂಪ ಪಡೆದುಕೊಳ್ಳುತ್ತಿದೆ. ಹಾಗಾಗಿ ನಮಗೆ ಶಾಂತಯುತ ಪರಿಹಾರ ಬೇಕಿದೆ’ ಎಂದು ಸಂಸತ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಕರೋನಾ ಪರಿಸ್ಥಿತಿಯಲ್ಲಿ ಚೀನಾ ಸುಮ್ಮನೆ ತಗಾದೆ ತೆಗೆಯುತ್ತಿದೆ. ಎಲ್ಎಸಿಯಲ್ಲಿ ಮೂಲಸೌಕರ್ಯ ಕಲ್ಪಿಸುತ್ತಿದೆ. ಆದರೆ ಎಲ್ಎಸಿಯನ್ನು ಎರಡೂ ದೇಶಗಳು ಗೌರವಿಸಬೇಕು. ಚೀನಾ ಏಪ್ರಿಲ್ ನಿಂದಲೇ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹಣೆಯನ್ನು ಮಾಡುತ್ತಿದೆ. ಈ ನಡೆಯನ್ನು ತಕ್ಷಣ ಚೀನಾ ಬಿಡಬೇಕು. ಗಡಿ ಸಮಸ್ಯೆಗೆ ನಮಗೆ ಶಾಂತಿಯುತ ಪರಿಹಾರ ಬೇಕು’ ಎಂದು ಅವರು ಹೇಳಿದರು.
ಗಡಿ ಸಮಸ್ಯೆಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮೋದಿಯವರು ಲಡಾಖ್ ಗೆ ಭೇಟಿ ನೀಡಿ ಸೈನಿಕರನ್ನು ಉತ್ತೇಜಿಸಿ ಭಾಷಣ ಮಾಡಿದ್ದರು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ