January 11, 2025

Newsnap Kannada

The World at your finger tips!

politics,election,congress

Narayan gowda congress opposition report to high command ನಾರಾಯಣಗೌಡ ಕಾಂಗ್ರೆಸ್‌ ಸೇರ್ಪಡೆ ವಿರೋಧ : ಹೈ ಕಮಾಂಡ್‌ಗೆ ವರದಿ - ಕೆ. ಬಿ. ಸಿ

ತುರ್ತು ಸ್ಪಂದನಾ ವಾಹನಗಳು 24*7 ಸೇವೆ ಒದಗಿಸಲಿವೆ : ಜಿಲ್ಲಾ ಮಂತ್ರಿ ನಾರಾಯಣಗೌಡ

Spread the love

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 16 ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳು ಜಿಲ್ಲೆಯಲ್ಲಿ 24*7 ಸೇವೆಯನ್ನು ಒದಗಿಸಲಿವೆ ಎಂದು ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವ.ಕೆ.ಸಿ ನಾರಾಯಣಗೌಡ ಹೇಳಿದರು.

ಮಂಡ್ಯ ಜಿಲ್ಲಾ ಪೊಲೀಸ್ ಡಿಎಆರ್ ಮೈದಾನದಲ್ಲಿ ಸಾರ್ವಜನಿಕರಿಗೆ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ವಾಹನಗಳಿಗೆ ಚಾಲನೆ ಬಳಿಕ ಮಾತನಾಡಿದ ಸಚಿವರು, ತುರ್ತು ಸ್ಪಂದನ ಸಹಾಯ ವ್ಯವಸ್ಥೆಯು 112 ಭಾರತ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ., ತುರ್ತು ಕರೆಗಳಾದ 100 ಪೊಲೀಸ್ 101 ಅಗ್ನಿಶಾಮಕ ಮತ್ತು ರಕ್ಷಣೆ ಹಾಗೂ ಇತರ ತುರ್ತು ಕರೆ ಸಂಖ್ಯೆಗಳನ್ನು 112ರಲ್ಲಿ ಏಕೀಕೃತಗೊಳಿಸುವುದಾಗಿದೆ ಎಂದರು.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಪಘಾತ,ಕೊಲೆ ದರೋಡೆ , ಕಳ್ಳತನ,ಸರಗಳ್ಳತನ ಇತರೆ ಅಕ್ರಮ ಚಟುವಟಿಕೆಗಳು ಮತ್ತು ಮಹಿಳಾ ,ಮಕ್ಕಳ ಹಿರಿಯ ನಾಗರೀಕರ ರಕ್ಷಣೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ತುರ್ತು ಸೇವೆಗಳು ಬೇಕಾದಲ್ಲಿ 112 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸೇವೆ ಪಡೆಯಬಹುದಾಗಿದೆ ಎಂದರು.

ಕರ್ತವ್ಯ ನಿರತ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಹತ್ತಿರ ಇರುವ ತುರ್ತು ಸ್ಪಂದನಾ ವಾಹನದ ಸಹಾಯದಿಂದ ಅಗತ್ಯ ತುರ್ತು ಸೇವೆಯನ್ನು ಒದಗಿಸುತ್ತಾರೆ ಎಂದರು. ಕೋವಿಡ್ ಮಹಾಮಾರಿ ಹೆಚ್ಚಾಗುತ್ತಿದೆ. ಸರ್ಕಾರ 14 ದಿನ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.ಬ ಎಲ್ಲರೂ ಮನೆಯಲ್ಲೇ ಇರಿ ಸಲಹೆ ನೀಡಿದರು.

ರೈತರಿಗೆ ಯಾವುದೇ ತೊಂದರೆ ಇಲ್ಲ, ಇತರ ಜನಗಳು ಅನಾವಶ್ಯಕವಾಗಿ ಓಡಾಡಬೇಡಿ, ಆದ್ದರಿಂದ ಅಗತ್ಯ ಸೇವೆ ಬಿಟ್ಟು ಇನ್ನುಳಿದವುಗಳನ್ನು ಮುಚ್ಚಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಮಂಜುನಾಥ್, ಮತ್ತಿತರರು ಇದ್ದರು.

Copyright © All rights reserved Newsnap | Newsever by AF themes.
error: Content is protected !!