ಪೊನ್ನಚಿ ಮಾರ್ಗ ಮದ್ಯೆ ಸಾರಿಗೆ ಬಸ್ಸನ್ನೇ ಅಟ್ಟಾಡಿಸಿದ ಗಜ ರಾಜ : ತಪ್ಪಿದ ಅನಾಹುತ

Team Newsnap
1 Min Read

ಹನೂರು ತಾಲೂಕಿನ ಪೊನ್ನಚಿ ಹಾಗು ಸುತ್ತ ಮುತ್ತಲ ಕಾಡಂಚಿನ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಆನೆ ಹಾವಳಿಗಳು ಹೆಚ್ಚಾಗುತ್ತಿದ್ದೂ ಒಂದಲ್ಲ ಒಂದು ತೊಂದರೆಗಳು ನಡೆಯುತ್ತಲೇ ಇವೆ.

ಸೋಮವಾರ ಮುಂಜಾನೆ ಕೂಡ ಬೆಳಿಗ್ಗೆ 6: 30 ರ ಸಮಯದಲ್ಲಿ ಪೊನ್ನಚಿಯಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಗೆ ಒಂಟಿ ಆನೆಯೊಂದು ಎದುರಾಗಿದೆ.

ಆನೆಯು ಸಾರಿಗೆ ಬಸ್ಸನ್ನು ಕೆಲ ದೂರ ಅಟ್ಟಾಡಿಸಿಕೊಂಡು ಬಂದಿದೆ. ಸಾರಿಗೆ ಬಸ್ ಚಾಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಹಳ ಬುದ್ದಿವಂತಿಕೆಯಿಂದ ವಾಹನವನ್ನು ಹಿಂಬದಿಗೆ ಚಲಾಯಿಸಿ ಸಾರ್ವಜನಿಕರ ರಕ್ಷಣೆ ಮಾಡಿದ್ದಾನೆ. ಚಾಲಕನ ಸಮಯ ಪ್ರಜ್ಞೆ ಮತ್ತು ಕರ್ತವ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಮಂಡ್ಯದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಶೃತಿ ಆತ್ಮಹತ್ಯೆ

ಪೊನ್ನಚಿ ಹಾಗು ಸುತ್ತ ಮುತ್ತಲ ಗ್ರಾಮದಲ್ಲಿ ಆನೆ ಹಾವಳಿ ಸಂಬಂಧ ಆನೆಯನ್ನು ಸೆರೆ ಹಿಡಿಯಲು ಇದೆ ತಿಂಗಳು ದಿನಾಂಕ 9.10.11. ರಂದು ಮೂರು ದಿನಗಳ ಕಾಲ ಪುಂಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ.

Share This Article
Leave a comment