ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ಟೋಲ್ ಶುಲ್ಕ ಜುಲೈ 1 ರಿಂದ ಶೇ. 20 ರಷ್ಟು ಏರಿಕೆ ಕಾಣಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‍ಎಚ್‍ಎಐ) ಟೋಲ್ ಹೆಚ್ಚಳದ ಬಗ್ಗೆ ಎಲಿವೇಟೆಡ್ ಟೋಲ್‍ವೇ ಕಂಪನಿ ಮನವಿ ಸಲ್ಲಿಸಿತ್ತು.
ಈ ಮನವಿಗೆ ಎನ್‍ಎಚ್‍ಎಐ ಗ್ರೀನ್ ಸಿಗ್ನಲ್ ನೀಡಿದೆ. ಪರಿಷ್ಕೃತ ಟೋಲ್ ಶುಲ್ಕ ಜುಲೈ 1 ರಿಂದ ಜಾರಿಗೆ ಬರಲಿದೆ. ಒಪ್ಪಂದದ ಪ್ರಕಾರ ರಸ್ತೆ ಬಳಕೆ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಈ ಶುಲ್ಕವು 2023ರ ಜೂನ್ 30ರವರೆಗೆ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಎಲಿವೇಟೆಡ್ ಟೋಲ್‍ವೇ ಕಂಪನಿ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಓದಿ – ಆಲಿಯಾ ಭಟ್ ಪ್ರೆಗ್ನೆಂಟ್: ಸಿಹಿ ಸುದ್ದಿ ಹಂಚಿಕೊಂಡ ಬಾಲಿವುಡ್ ಸ್ಟಾರ್ ದಂಪತಿ
ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ಎರಡೂ ಟೋಲ್ ಗೇಟ್‍ಗಳಿಗೂ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. ಸಿಲ್ಕ್ ಬೋರ್ಡ್ ವೃತ್ತದಿಂದ ಅತ್ತಿಬೆಲೆವರೆಗಿನ ರಸ್ತೆಯಲ್ಲಿ ಐಟಿ ಹಾಗೂ ಇತರೆ ಕಂಪನಿಗಳು ಹೆಚ್ಚಿವೆ. ನಿತ್ಯವೂ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಕೊರೊನಾ ಬಳಿಕ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದೆ,
ಈ ಸಂದರ್ಭದಲ್ಲಿ ಏಕಾಏಕಿ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
- ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
- ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
- ನಂಬುಗೆಯೇ ಇಂಬು
More Stories
ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!