ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ಮೋದಿ ಸರ್ಕಾರದ ಜಿಎಸ್‍ಟಿ ಕಾರಣ ಎಂದು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಟೀಕಿಸಿದ್ದಾರೆ. ಮೋದಿ ಸರ್ಕಾರ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ, ಜಿಎಸ್‍ಟಿ ಎಂಬುದು ತೆರಿಗೆ ವ್ಯವಸ್ಥೆ ಅಲ್ಲ, ಅದು ಬಡವರ ಮೇಲಿನ ದಾಳಿಯಾಗಿದೆ. ಜಿಎಸ್‍ಟಿ ಸಣ್ಣ ಉದ್ಯಮಗಳು, ಉದ್ಯೋಗಗಳನ್ನು ಕಸಿದುಕೊಂಡು ರಾಜ್ಯಗಳ ಆರ್ಥಿಕ ಭವಿಷ್ಯ ನಾಶ ಮಾಡಿದೆ. ಜಿಎಸ್‍ಟಿ ಅಸಂಘಟಿತ ವಲಯದ ಆರ್ಥಿಕತೆ ಮೇಲಿನ ಎರಡನೇ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳು ಜಿಎಸ್‍ಟಿಯಡಿ ತೆರಿಗೆ ಸಲ್ಲಿಸಲು ಸಾಧ್ಯವಿಲ್ಲ. ದೊಡ್ಡ ಕಂಪನಿಗಳು 5ರಿಂದ 15 ಖಾತೆಗಳನ್ನು ಹೊಂದುವ ಮೂಲಕ ಸುಲಭವಾಗಿ ಪಾವತಿಸಬಹುದು. ಜಿಎಸ್‍ಟಿ ಮೂಲಕ ಸಂಗ್ರಹಿಸಿದ ಹಣ ರಾಜ್ಯಗಳಿಗೆ ತಲುಪಿಸಲಾಗದೆ, ರಾಜ್ಯ ಸರ್ಕಾರಗಳು ನೌಕರರಿಗೆ ವೇತನ ಪಾವತಿಸಲು ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ