ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ED) ಸೆಪ್ಟೆಂಬರ್ 30ರಂದು ಪ್ರಕರಣ ದಾಖಲಿಸಿದೆ.
ಫೆಡರಲ್ ಏಜೆನ್ಸಿ, ಜಾರಿ ಪ್ರಕರಣ ಮಾಹಿತಿ ವರದಿ (Enforcement Case Information Report – ECIR) ಸಲ್ಲಿಸಿರುವುದರಿಂದ, ಸಿಎಂ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವಾಸ ಹಂಚಿಕೆ ಹಗರಣದಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್ 27ರಂದು ಎಫ್‌ಐಆರ್ ದಾಖಲಿಸಿದ್ದಾರೆ.
ಲೋಕಾಯುಕ್ತ ಪೊಲೀಸರ ದಾಖಲಿಸಿರುವ ಎಫ್‌ಐಆರ್ನಲ್ಲಿ, ಸಿದ್ದರಾಮಯ್ಯ ಅವರನ್ನು ಎ1 ಆರೋಪಿ, ಅವರ ಪತ್ನಿ ಬಿ.ಎಂ.ಪಾರ್ವತಿ ಅವರನ್ನು ಎ2, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಎ3 ಮತ್ತು ದೇವರಾಜು ಅವರನ್ನು ಎ4 ಆರೋಪಿಗಳಾಗಿ ಪರಿಗಣಿಸಲಾಗಿದೆ.
ಮುಡಾ ಭೂ ಹಗರಣ ಕುರಿತಂತೆ, ಮುಖ್ಯಮಂತ್ರಿಯ ವಿರುದ್ಧ ನ್ಯಾಯಾಲಯವು ಸೆಪ್ಟೆಂಬರ್ 25 ರಂದು ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶ ನೀಡಿತ್ತು. ಈ ಪ್ರಕರಣದಲ್ಲಿ, MUDA ಸ್ವಾಧೀನಪಡಿಸಿಕೊಂಡ ಭೂಮಿಯ ಹೋಲಿಸಿದರೆ, ಮೈಸೂರಿನ ಮಾರುಕಟ್ಟೆ ಪ್ರದೇಶದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರ ನಿವೇಶನಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.ಕೊಹ್ಲಿ 27,000 ರನ್ ಪೂರೈಸಿ ಹೊಸ ಮೈಲಿಗಲ್ಲು ಸಾಧನೆ
ಈ ಎಲ್ಲ ಪ್ರಕರಣಗಳ ಹಿನ್ನೆಲೆಯಲ್ಲಿ, ದೂರುದಾರ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಹಿನ್ನಲೆಯಲ್ಲಿ, ED ಅಧಿಕಾರಿಗಳು ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
More Stories
ಧಾರವಾಡದ ಖಾಸಗಿ ಬಸ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 98 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ
ಕರ್ನಾಟಕ ಸರ್ಕಾರದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ನವೆಂಬರ್ನಲ್ಲಿ KSRTC ಬಸ್ಗಳಲ್ಲಿ ‘ಕ್ಯಾಶ್ಲೆಸ್ ವ್ಯವಸ್ಥೆ’ ಜಾರಿ