ವಿಶ್ವದ ಅತಿ ದೊಡ್ಡ ಏಕತೆಯ ಪ್ರತಿಮೆಯ ಬಳಿ ಭೂಕಂಪ.

Team Newsnap
2 Min Read

ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದ ಬಳಿ 3.1 ತೀವ್ರತೆಯ ಕಂಪನ ದಾಖಲಾಗಿದೆ. ಈ ಕಂಪನ ದಿಂದ ಏಕತಾ ಪ್ರತಿಮೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

statue

ಸೋಮವಾರ ರಾತ್ರಿ 10.07 ಗಂಟೆಗೆ ವಿಶ್ವದ ಅತಿ ದೊಡ್ಡ, 182 ಮೀಟರ್ ಎತ್ತರದ ಏಕತೆಯ ಪ್ರತಿಮೆ ಇರುವ ಕೆವಾಡಿಯಾದಿಂದ ಪೂರ್ವ-ಆಗ್ನೇಯಕ್ಕೆ 12 ಕಿಮೀ ದೂರ ಹಾಗೂ 12.7 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಇದನ್ನು ಓದಿ – ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಮಂಡ್ಯ ಶಾಸಕ ಎಂ ಶ್ರೀನಿವಾಸ್

ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ಹೇಳಿಕೆಯಲ್ಲಿ ಪ್ರಬಲ ಭೂಕಂಪಗಳು ಮತ್ತು ಚಂಡಮಾರುತಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾದ ಏಕತೆಯ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಮಾರಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಹುಲ್ ಪಟೇಲ್ ತಿಳಿಸಿದ್ದಾರೆ.

ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಮಂಡ್ಯ ಶಾಸಕ ಎಂ ಶ್ರೀನಿವಾಸ್

ಮಂಡ್ಯ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಮಂಡ್ಯ ಶಾಸಕ ಎಂ. ಶ್ರೀನಿವಾಸ್‌ ಕಪಾಳಮೋಕ್ಷ ಮಾಡಿದ್ದಾರೆ

ಮಂಡ್ಯದ ಉನ್ನತೀಕರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜು ಉದ್ಘಾಟನೆ ವೇಳೆ ಶಾಸಕ ಎಂ. ಶ್ರೀನಿವಾಸ್ ಕೇಂದ್ರದ ಪ್ರಾಂಶುಪಾಲ ನಾಗಾನಂದ್ ಮೇಲೆ ಹಲ್ಲೆ ಮಾಡಿದ್ದಾರೆ

ಐಟಿಐ ಕೇಂದ್ರಕ್ಕೆ ಆಗಮಿಸಿದ ಶಾಸಕ ಕೇಂದ್ರವನ್ನು ಉದ್ಘಾಟಿಸಿದರು. ನಂತರ ನಗರಸಭಾಧ್ಯಕ್ಷ ಎಚ್.ಎಸ್. ಮಂಜು ಕಂಪ್ಯೂಟರ್ ಲ್ಯಾಬ್‌ ಉದ್ಘಾಟಿಸಿದರು.

ಶಾಸಕ ಮತ್ತು ನಗರಸಭಾಧ್ಯಕ್ಷ ಪ್ರಯೋಗಾಲಯದ ಒಳಗೆ ತೆರಳಿದದರು, ಆದರೆ ಕಿರಿದಾದ ಜಾಗವಾಗಿದ್ದರಿಂದ ಪ್ರಾಂಶುಪಾಲರು ಮುಂದೆ ಬರಲು ಸಾಧ್ಯವಾಗಲಿಲ್ಲ. ಈ ವೇಳೆ ಕಂಪ್ಯೂಟರ್ ಕೊಠಡಿ ವೀಕ್ಷಣೆ ವೇಳೆ ಮಾಹಿತಿಗಾಗಿ ಪ್ರಾಂಶುಪಾಲರನ್ನು ಹುಡುಕಾಡಿದ್ದಾರೆ.

ತಡವಾಗಿ ಮುಂದೆ ಬಂದಿದ್ದರಿಂದ ಕುಪಿತಗೊಂಡ ಶ್ರೀನಿವಾಸ್‌ಪ್ರಾಂಶುಪಾಲ ನಾಗಾನಂದ್‌ ಮುಂದೆ ಬರುತ್ತಿದ್ದಂತೆ ಅವರಿಗೆ ಮೂರ್ನಾಲ್ಕು ಏಟುಕೊಟ್ಟಿದ್ದಾರೆ. ಬಂದ ಅತಿಥಿಗಳಿಗೆ ಇಲ್ಲಿನ ಕಾರ್ಯಕ್ಷೇತ್ರ ಮತ್ತು ಕಾರ್ಯಕ್ಷಮತೆ ಬಗ್ಗೆ ವಿವರಿಸದ ಪ್ರಾಂಶುಪಾಲರ ಕ್ರಮಕ್ಕೆ ಶಾಸಕ ಕೋಪಗೊಂಡು ಕೈ ಮಾಡಿದ್ದಾರೆ.

ಶಾಸಕರ ದಿಢೀರ್ ಕೋಪದಿಂದ ಒಂದು ಕ್ಷಣ ಗಲಿಬಿಲಿಗೊಂಡ ಪ್ರಾಂಶುಪಾಲರು ನಗುತ್ತಲೇ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಶಾಸಕರು ಮತ್ತು ಅತಿಥಿಗಳು ಕೇಂದ್ರದಲ್ಲಿರುವ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿ ಪ್ರಾಂಶುಪಾಲರು, ಅಧ್ಯಾಪಕರದಿಂದ ವಿವರಣೆ ಪಡೆದು ತೃಪ್ತರಾಗಿ ಹೊರನಡೆದರು.

30 ಕೋಟಿ ರು ವೆಚ್ಚದಲ್ಲಿಐಟಿಐ ಕೇಂದ್ರ ಸ್ಥಾಪನೆ :

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ 30 ಕೋಟಿ ರು ವೆಚ್ಚದಲ್ಲಿ ಈ ಐಟಿಐ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಜ್ಯಾದ್ಯಂತ ಸುಮಾರು 150 ಕೇಂದ್ರಗಳು ಸ್ಥಾಪನೆಯಾಗಿವೆ. ಈ ಕೇಂದ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಏಕ ಕಾಲಕ್ಕೆ ವರ್ಚುವಲ್ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.

ಯುವಜನರಿಗೆ ಅತ್ಯಾಧುನಿಕ ತರಬೇತಿ ನೀಡಲು ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, 6 ವಿವಿಧ ಕುಶಲಕರ್ಮಿಗಳಿಗೆ ಈ ಕೇಂದ್ರಗಳು ತರಬೇತಿ ನೀಡಲಿವೆ. ಉದ್ಯೋಗಾವಶಕ್ಕೆ ಅನುಗುಣವಾಗಿ ಇಲ್ಲಿ ಕುಶಲಕರ್ಮಿಗಳು ತರಬೇತಿ ಪಡೆದು ಸ್ವಂತ ಉದ್ದಿಮೆ ಸ್ಥಾಪಿಸುವ ಮೂಲಕ ಸ್ವಾವಲಂಭಿ ಬದುಕು ಸಾಗಿಸಲು ನೆರವಾಗಲಿವೆ.

Share This Article
Leave a comment