November 17, 2024

Newsnap Kannada

The World at your finger tips!

bukampana

ನೇಪಾಳದಲ್ಲಿ ಭೂಕಂಪ : 129 ಮಂದಿ ಸಾವು – 500 ಮಂದಿಗೆ ಗಾಯ – ದೆಹಲಿಯಲ್ಲೂ ನಡುಗಿದ ಭೂಮಿ

Spread the love

ನೇಪಾಳ :

  • ನೇಪಾಳದ ಜಜಾರ್ ಕೋಟ್ ಜಿಲ್ಲೆಯಲ್ಲಿ 10 ಕಿಮಿ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು
  • ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲು
  • ಜಜಾರ್​ಕೋಟ್​ನಲ್ಲಿ ಭಾಗದಲ್ಲಿ 19 ಲಕ್ಷ ಜನಸಂಖ್ಯೆ ವಾಸ

ಹಿಮಾಲಯದ ತಪ್ಪಲು ನೇಪಾಳದಲ್ಲಿ ಕಳೆದ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 129 ಮಂದಿ ಮೃತಪಟ್ಟಿದ್ದಾರೆ. 500 ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನೇಪಾಳದ ಜಜಾರ್ ಕೋಟ್ ನ ಪಶ್ಚಿಮ ಭಾಗದಲ್ಲಿ 6.4 ತೀವ್ರತೆಯ ಭೂಕಂಪನ ದಾಖಲಾಗಿದೆ. ಇದು ಬೆಟ್ಟ-ಗುಡ್ಡಪ್ರದೇಶವಾಗಿದೆ.

ಸುಮಾರು 19 ಲಕ್ಷ ಜನಸಂಖ್ಯೆ ಹೊಂದಿದೆ. ಜಜಾರ್ ಕೋಟ್ ಜಿಲ್ಲೆಯಲ್ಲಿ 84 ಮಂದಿ ಹಾಗೂ ಪಕ್ಕದ ಪಶ್ಚಿಮ ರುಕುಮ್ ಜಿಲ್ಲೆಯಲ್ಲಿ 35 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.

ನೇಪಾಳ ಪ್ರಧಾನಿ ಘಟನೆಗೆ ಸಂತಾಪ ಸೂಚಿಸಿದ್ದಾರೆ ದೇಶದ 3 ಭದ್ರತಾ ಏಜೆನ್ಸಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆ.

ಜಜಾರ್ ಕೋಟ್ ಕಠ್ಮಂಡುವಿನಿಂದ ಸುಮಾರು 500 ಕಿಲೋ ಮೀಟರ್ ದೂರದಲ್ಲಿದೆ. ನೇಪಾಳ ಭಾಗದಲ್ಲಿ ಅ. 3 ರಿಂದ ಭೂಕಂಪ ಸಂಭವಿಸುತ್ತಲೇ ಇದೆ.

ಸುತ್ತಲೂ ಭೀತಿಯ ವಾತಾವರಣವಿತ್ತು. ದೆಹಲಿ, ಉತ್ತರ ಪ್ರದೇಶ, ಬಿಹಾರ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದೆ.

Copyright © All rights reserved Newsnap | Newsever by AF themes.
error: Content is protected !!