PSI ನೇಮಕಾತಿ ವಿಭಾಗದ DYSP ಶಾಂತಕುಮಾರ್ ಬಂಧನ

Team Newsnap
1 Min Read

ಪಿಎಸ್​​​ಐ(PSI) ಅಕ್ರಮ ಪ್ರಕರಣದಲ್ಲಿ CID ಅಧಿಕಾರಿಗಳು ಡಿವೈಎಸ್​​ಪಿ ಶಾಂತಕುಮಾರ್​​ ಅವರನ್ನು ಬಂಧಿಸಿದ್ದಾರೆ. ಕಳೆದ 2 ವರ್ಷದ ಹಿಂದೆ ಇನ್ಸ್​ಪೆಕ್ಟರ್​​ನಿಂದ DYSPಆಗಿ ಬಡ್ತಿ ಪಡೆದಿದ್ದರು. ಈಗ ಪಿಎಸ್​​ಐ ಕೇಸ್​​ನಲ್ಲಿ ಜೈಲು ಸೇರಿದ್ದಾರೆ.

ಶಾಂತಕುಮಾರ್ 1996ರ ಬ್ಯಾಚ್​​ನ CAR ಕಾನ್ಸ್​​ಟೇಬಲ್. ಆಗಲೇ ಸಖತ್​ ಟೆಕ್ನಿಕಲಿ ಶಾರ್ಪ್​ ಆಗಿದ್ದ ಶಾಂತಕುಮಾರ್​​, ಬಳಿಕ 2006ರಲ್ಲಿ RSI ಪರೀಕ್ಷೆ ಬರೆದರು. ಪೊಲೀಸ್​ ಸರ್ವೀಸ್​​ನಲ್ಲಿ ಇರುವಾಗಲೇ RSI ಆಗಿ ಸೆಲೆಕ್ಟ್ ಆಗ್ತಾರೆ. ಬಳಿಕ 2006ರಲ್ಲಿ CAR RSI ಆಗಿ ನೇಮಕವಾಗುತ್ತಾರೆ.

ಇದನ್ನು ಓದಿ :ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ : ಜೂನ್ 10 ರಂದು ಮತದಾನ – ಅಂದೇ ಫಲಿತಾಂಶ

ಗುಲ್ಬರ್ಗದಲ್ಲಿ ಒಂದು ವರ್ಷ RSI ಟ್ರೈನಿಂಗ್ ಬಳಿಕ ಪ್ರೊಬೆಷನರಿ ತುಮಕೂರಿನಲ್ಲಿ ಮುಗಿಸುತ್ತಾರೆ ಅಷ್ಟರಲ್ಲಾಗಲೇ PSI ನೇಮಕಾತಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಈ ಶಾಂತಕುಮಾರ್ ಅವರನ್ನು ಸೇರಿಸಿಕೊಳ್ಳುತ್ತಾರೆ.

2007-08 ರಿಂದ ನೇಮಕಾತಿ ವಿಭಾಗದಲ್ಲೇ ಇದ್ದ ಇವರು,ಏನೆಲ್ಲಾ ಆಗುತ್ತೆ ಎಂಬುದು ತಿಳಿದುಕೊಂಡಿದ್ದರು, ಒಎಂಆರ್ ತಿದ್ದಲು ಶಾಂತಕುಮಾರ್‌ ನೆರವಾಗಿದ್ದರು. ಶಾಂತಕುಮಾರ್ ಅಕ್ರಮಕ್ಕೆ ಕೈಜೋಡಿಸಿ ಒಎಂಆರ್ ತಿದ್ದಿಸಿದ್ದಾರೆ. ಈ ಬಗ್ಗೆ ಪುರಾವೆ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು.

Share This Article
Leave a comment