ಪಿಎಸ್ಐ(PSI) ಅಕ್ರಮ ಪ್ರಕರಣದಲ್ಲಿ CID ಅಧಿಕಾರಿಗಳು ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಬಂಧಿಸಿದ್ದಾರೆ. ಕಳೆದ 2 ವರ್ಷದ ಹಿಂದೆ ಇನ್ಸ್ಪೆಕ್ಟರ್ನಿಂದ DYSPಆಗಿ ಬಡ್ತಿ ಪಡೆದಿದ್ದರು. ಈಗ ಪಿಎಸ್ಐ ಕೇಸ್ನಲ್ಲಿ ಜೈಲು ಸೇರಿದ್ದಾರೆ.
ಶಾಂತಕುಮಾರ್ 1996ರ ಬ್ಯಾಚ್ನ CAR ಕಾನ್ಸ್ಟೇಬಲ್. ಆಗಲೇ ಸಖತ್ ಟೆಕ್ನಿಕಲಿ ಶಾರ್ಪ್ ಆಗಿದ್ದ ಶಾಂತಕುಮಾರ್, ಬಳಿಕ 2006ರಲ್ಲಿ RSI ಪರೀಕ್ಷೆ ಬರೆದರು. ಪೊಲೀಸ್ ಸರ್ವೀಸ್ನಲ್ಲಿ ಇರುವಾಗಲೇ RSI ಆಗಿ ಸೆಲೆಕ್ಟ್ ಆಗ್ತಾರೆ. ಬಳಿಕ 2006ರಲ್ಲಿ CAR RSI ಆಗಿ ನೇಮಕವಾಗುತ್ತಾರೆ.
ಇದನ್ನು ಓದಿ :ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ : ಜೂನ್ 10 ರಂದು ಮತದಾನ – ಅಂದೇ ಫಲಿತಾಂಶ
ಗುಲ್ಬರ್ಗದಲ್ಲಿ ಒಂದು ವರ್ಷ RSI ಟ್ರೈನಿಂಗ್ ಬಳಿಕ ಪ್ರೊಬೆಷನರಿ ತುಮಕೂರಿನಲ್ಲಿ ಮುಗಿಸುತ್ತಾರೆ ಅಷ್ಟರಲ್ಲಾಗಲೇ PSI ನೇಮಕಾತಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಈ ಶಾಂತಕುಮಾರ್ ಅವರನ್ನು ಸೇರಿಸಿಕೊಳ್ಳುತ್ತಾರೆ.
2007-08 ರಿಂದ ನೇಮಕಾತಿ ವಿಭಾಗದಲ್ಲೇ ಇದ್ದ ಇವರು,ಏನೆಲ್ಲಾ ಆಗುತ್ತೆ ಎಂಬುದು ತಿಳಿದುಕೊಂಡಿದ್ದರು, ಒಎಂಆರ್ ತಿದ್ದಲು ಶಾಂತಕುಮಾರ್ ನೆರವಾಗಿದ್ದರು. ಶಾಂತಕುಮಾರ್ ಅಕ್ರಮಕ್ಕೆ ಕೈಜೋಡಿಸಿ ಒಎಂಆರ್ ತಿದ್ದಿಸಿದ್ದಾರೆ. ಈ ಬಗ್ಗೆ ಪುರಾವೆ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ