February 19, 2026

Newsnap Kannada

The World at your finger tips!

dysp lakshmi

ಡಿವೈಎಸ್ಪಿ ಲಕ್ಷ್ಮೀ ಕೊಲೆ ಅಲ್ಲ : ಆತ್ಮಹತ್ಯೆ – ವಶಕ್ಕೆ ಪಡೆದಿದ್ದ ನಾಲ್ವರು ರಿಲೀಸ್

Spread the love

ಕಳೆದ ಡಿ 16 ಗೆಳೆಯನ ಪ್ಲಾಟ್ ನ ರೂಂ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆ ಅಲ್ಲ ಎಂದು ವೈದ್ಯಕೀಯ ವರದಿಗಳು ಸ್ಪಷ್ಟವಾಗಿ ಹೇಳಿವೆ.

ಡಿವೈಎಸ್ಪಿ ಲಕ್ಷ್ಮೀ ಅವರ ಮರಣೋತ್ತರ ಪರೀಕ್ಷೆ ಮತ್ತು ಎಫ್ ಎಸ್ ಎಲ್ ವರದಿಗಳು ಸ್ಪಷ್ಟವಾಗಿ ಇದೊಂದು ಆತ್ಮಹತ್ಯೆ ಎಂದು ದೃಢವಾಗಿ ಹೇಳಿವೆ.

ಈ ವರದಿಯ ಆಧಾರದಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದ ಲಕ್ಷ್ಮೀ ಗೆಳೆಯ ಮನೋಹರ್, ಪ್ರಜ್ವಲ್. ಧರ್ಮೇಗೌಡ ಸೇರಿದಂತೆ ನಾಲ್ವರನ್ನು ಪೋಲಿಸರು ಬಿಡುಗಡೆ ಮಾಡಿದ್ದಾರೆ.

ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣಗಳನ್ನು ಹುಡುಕುತ್ತಿರುವ ಪೋಲಿಸರು, ಖಿನ್ನತೆ ಅಥವಾ ಕೆಲಸದಲ್ಲಿ ಕಿರುಕುಳ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಅಂಶಗಳು ತನಿಖೆಗೆ ಪೂರಕ ವಾಗಿರುತ್ತವೆ.

ಈ ನಡುವೆ ಲಕ್ಷ್ಮೀ ತಂದೆ ವೆಂಕಟೇಶ್ ಹಾಗೂ ಪತಿ ನವೀನ್ ಅವರು ಲಕ್ಷ್ಮೀ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

error: Content is protected !!