ಡಿ.ಎಸ್.ನಾಗಭೂಷಣರ ʻಗಾಂಧಿ ಕಥನʼ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಆಯ್ಕೆ

Team Newsnap
1 Min Read

ಕನ್ನಡದ ಪ್ರಮುಖ ಲೇಖಕ ಡಿ.ಎಸ್.ನಾಗಭೂಷಣ ಅವರ ‘ಗಾಂಧಿ ಕಥನ’ ಕೃತಿಯು ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ವಿವಿಧ ಪ್ರಾಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.

‘ಬಾಲ ಪುರಸ್ಕಾರ’ಕ್ಕೆ ಬಸುಬೇವಿನಗಿಡದ ಅವರ ‘ ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿ ಆಯ್ಕೆಯಾಗಿದೆ.

ಅಕಾಡೆಮಿಯು ನೀಡುವ ‘ಯುವ ಪುರಸ್ಕಾರ’ಕ್ಕೆ ಎಚ್.ಲಕ್ಷೀನಾರಾಯಣ ಸ್ವಾಮಿ ಅವರ ‘ತೊಗಲ ಚೀಲದ ಕರ್ಣ ‘ ಮಹಾ ಕಾವ್ಯವು ಆಯ್ಕೆಯಾಗಿದೆ.

ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರುಹಾಗೂ ಸನ್ಮಾನ ಒಳಗೊಂಡಿದ್ದರೆ. ಯುವ ಹಾಗೂ ಬಾಲ ಪುರಸ್ಕಾರಗಳು 50 ಸಾವಿರ ರೂ. ಸನ್ಮಾನ ಒಳಗೊಂಡಿರುತ್ತವೆ.

ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಕಮಲಾ ಹಂಪನಾ, ಜಗದೀಶ್ ಕೊಪ್ಪ ಹಾಗೂ ವಿಜಯಕುಮಾರಿ ಕೆಲಸ ನಿರ್ವಹಿಸಿದ್ದರೆ, ಬಾಲ ಸಾಹಿತ್ಯ ಪ್ರಶಸ್ತಿಗೆ ಟಿ.ಪಿ.ಅಶೋಕ, ಮಾಲತಿ ಪಟ್ಟಣಶೆಟ್ಟಿ ಹಾಗೂ ಎಸ್.ದಿವಾಕರ ಅವರು ಜ್ಯೂರಿಗಳಾಗಿದ್ದರು. ಪ್ರಮುಖ ಕೃತಿ ಆಯ್ಕೆಯ ಜ್ಯೂರಿಗಳಾಗಿ ಬೊಳುವಾರ್ ಮಹಮ್ಮದ್ ಕುಂಯಿ, ಅಮರೇಶ ನುಗಡೋಣಿ ಹಾಗೂ ಸಬೀಹಾ ಭೂಮಿಗೌಡ ಅವರಿದ್ದರು.

Share This Article
Leave a comment