March 29, 2023

Newsnap Kannada

The World at your finger tips!

crime , murder , family

Karwar: Property dispute kills four members of the same family ಕಾರವಾರ : ಆಸ್ತಿ ವಿವಾದ ಒಂದೇ ಕುಟುಂಬದ ನಾಲ್ವರ ಹತ್ಯೆ

ಕುಡಿದ ಮತ್ತಿನಲ್ಲಿ ಮಗಳ ಎದುರೇ ಪತ್ನಿಯನ್ನು ಕೊಂದ ಪತಿ

Spread the love

ಕುಡಿದ ಮತ್ತಿನಲ್ಲಿ ಮಗಳ ಕಣ್ಣೆದುರೇ ತಾಯಿಯನ್ನು ತಂದೆ ಕೊಲೆ ಮಾಡಿರುವ ದಾರುಣ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಜರುಗಿದೆ.

ಮೃತ ಮಹಿಳೆಯನ್ನು ಅರಳಕುಪ್ಪೆ ಗ್ರಾಮದ ಶೋಭಾ (43) ಗುರುತಿಸಲಾಗಿದೆ. ಮನೋಹರ್ (48) ಎಂಬಾತ ಪತ್ನಿಯನ್ನೇ ಕೊಂದ ಪಾಪಿ ಪತಿಯಾಗಿದ್ದಾನೆ.ಸಿದ್ದು ಕೋಲಾರದಲ್ಲಿ ಗೆಲ್ಲುವುದಿಲ್ಲ – ಖೆಡ್ಡಾಗೆ ಬಿದ್ದಿದ್ದಾರೆ: ಸಚಿವ ಸುಧಾಕರ್‌

23 ವರ್ಷಗಳ ಹಿಂದೆ ಒಂದೇ ಗ್ರಾಮದ ಶೋಭಾ ಹಾಗೂ ಮನೋಹರ್ ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದರು. ಮನೋಹರ್ ಕೆಲಸಕ್ಕೆ ಹೋಗದೆ ಉಂಡಾಡಿ ಗುಂಡನ ರೀತಿ ಓಡಾಡಿಕೊಂಡಿದ್ದ. ಇಬ್ಬರು ಮಕ್ಕಳಿದ್ದರೂ, ಬೇಜವಾಬ್ದಾರಿಯಿಂದ ಕಂಠಪೂರ್ತಿ ಕುಡಿದು ಪ್ರತಿನಿತ್ಯ ಪತ್ನಿ ಜೊತೆ ಮನೋಹರ್ ಗಲಾಟೆ‌ ಮಾಡುತ್ತಿದ್ದ.

ಮಂಗಳವಾರವೂ ಬೈಕ್ ಸಾಲದ ವಿಚಾರಕ್ಕೆ ಮನೆಯಲ್ಲಿ ಕಿರಿಕ್ ಆಗಿದೆ. ಮಗನಿಗೆ ಸಾಲದ ಕಂತಿನಲ್ಲಿ ಶೋಭಾ ಬೈಕ್ ಕೊಡಿಸಿದ್ದರು.

ಕಳೆದ 3 ತಿಂಗಳಿನಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಮನೋಹರ್‌ಗೆ ಕರೆ ಮಾಡಿ ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿಯವರು ಕೇಳಿದ್ದರು. ಅಷ್ಟೇ ಅಲ್ಲದೆ ಮನೆ ಬಳಿಗೆ ಬಂದು ಹಣ ಕಟ್ಟುವಂತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಒತ್ತಡ ಹಾಕಿದ್ದರು. ಈ ವಿಚಾರಕ್ಕೆ ಕುಪಿತಗೊಂಡ ಮನೋಹರ್‌ನಿಂದ ಜಗಳ ಪ್ರಾರಂಭವಾಗಿದ್ದು, ಕುಡಿದ ಮತ್ತಿನಲ್ಲಿ ಪತ್ನಿಗೆ ಮನಬಂದಂತೆ ಬೈದು ಗಲಾಟೆ ಮಾಡಿದ್ದ. ಪರಸ್ಪರ ಬೈದಾಟದಿಂದ ಪತಿ, ಪತ್ನಿಯರ ಜಗಳ ತಾರಕಕ್ಕೆ ಏರಿದೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಮನೋಹರ್ ಪತ್ನಿ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಕುಡುಗೋಲಿನಿಂದ ಮಗಳ ಕಣ್ಣೆದುರೇ ಶೋಭಾಳ ಮೇಲೆ ಮನೋಹರ್ ಹಲ್ಲೆ ನಡೆಸಿದ್ದಾನೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಶೋಭಾ ಸಹಾಯಕ್ಕೆ ಸ್ಥಳೀಯರು ಬಂದಿಲ್ಲ, ಮಗಳು ಅನುಷಾ ಕೇಳಿಕೊಂಡರೂ ಯಾರ ಸಹಾಯವೂ ಸಿಗಲಿಲ್ಲ. ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಕೂಡ ಬಾರದ ಕಾರಣ ಶೋಭಾ ಸಾವನ್ನಪ್ಪಿದ್ದಾಳೆ. ಪತ್ನಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮನೋಹರ್‌ನನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ತಂದೆಗೆ ಕಠಿಣ ಶಿಕ್ಷೆ ನೀಡಿ, ಸಾಯೋವರೆಗೂ ಜೈಲಲ್ಲೇ ಕೊಳೆಯುವ ರೀತಿ ಮಾಡಬೇಕು ಎಂದು ಪುತ್ರಿ ಅನುಷಾ ಮನವಿ ಮಾಡಿದ್ದಾಳೆ. ಸದ್ಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!