ಸಮುದ್ರದ ಮಧ್ಯೆ ಐಷಾರಾಮಿ ಹಡಗಿನಲ್ಲೇ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದಲ್ಲಿ ಸ್ಟಾರ್ ನಟನ ಮಗನೂ ಸೇರಿ ಎನ್ ಸಿಬಿ ಅಧಿಕಾರಿಗಳು10 ಮಂದಿಯನ್ನು ಕಳೆದ ರಾತ್ರಿ ವಶಕ್ಕೆ ಪಡೆದಿದ್ದಾರೆ.

ಸಮುದ್ರದ ಮೂಲಕ ಗೋವಾಕ್ಕೆ ಹೋಗುತ್ತಿದ್ದ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ (ಎನ್ ಸಿ ಬಿ ) ರಾಷ್ಟ್ರೀಯ ಮಾದಕ ದ್ರವ್ಯ ತಡೆ ದಳದಿಂದ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಡ್ರಗ್ಸ್ ಸಮೇತ 10 ಜನರನ್ನು ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ದಾಳಿ ಮಾಡಿ ಕೊಕೇನ್, ಎನ್‍ಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
More Stories
ಧಾರವಾಡದಲ್ಲಿ ನಕಲಿ ನೋಟು ಚಲಾವಣೆ: ಬಿಜೆಪಿ ಮುಖಂಡ ಸೇರಿ ಮೂವರು ಬಂಧನ
ಮಗಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಂತವೈದ್ಯೆ – ಸಾವಿಗೆ ಹಲವು ಅನುಮಾನ
ಪ್ರವೀಣ್ ನೆಟ್ಟಾರು ಹತ್ಯೆ – ಮತ್ತಿಬ್ಬರು ಸೇರಿ 6 ಮಂದಿ ಬಂಧನ