ರೇವಾ ಪಾರ್ಟಿ ಹಾಗೂ ಆ ಪಾರ್ಟಿಯಲ್ಲಿ ಪತ್ತೆಯಾದ ಮಾದಕ ವಸ್ತು ಕೊಕೇನ್ ಅನ್ನು ವಶಪಡಿಸಿಕೊಂಡ ಹೈದ್ರಾಬಾದ್ ಬಂಜಾರ್ ಹಿಲ್ಸ್ ಪೋಲಿಸರು ಹಿರಿಯ ನಟ ನಾಗಬಾಬು ಅವರ ಪುತ್ರಿ, ನಟಿ ನಿಹಾರಿಕಾ ಕೊನಿಡೇಲಾ ಮತ್ತು ಬಿಗ್ ಬಾಸ್ ತೆಲುಗು ವಿಜೇತ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ 150 ಮಂದಿಯನ್ನು ಭಾನುವಾರ ಬಂಧಿಸಿದ್ದಾರೆ.
ಬಂಜಾರಾ ಹಿಲ್ಸ್‌ನ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ನಲ್ಲಿರುವ ದಿ ಮಿಂಕ್ ಪಬ್ ಆವರಣದಲ್ಲಿ ಲಕ್ಷ ರು ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
ನಿಹಾರಿಕಾ ಅಥವಾ ರಾಹುಲ್ ಅವರ ಪರೀಕ್ಷಾ ಫಲಿತಾಂಶಗಳು ಮಾದಕ ದ್ರವ್ಯ ಸೇವನೆಯನ್ನು ತೋರಿಸುತ್ತವೆಯೇ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ,
ಹಿರಿಯ ನಟ ನಾಗಬಾಬು ಅವರು ತಮ್ಮ ಮಗಳಿಗೂ ಡ್ರಗ್ಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನನ್ನ ಮಗಳು ನಿಹಾರಿಕಾ ನಿನ್ನೆ ರಾತ್ರಿ ಪಂಚತಾರಾ ಹೋಟೆಲ್‌ನ ಪಬ್‌ನಲ್ಲಿ ಹಾಜರಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಾಳೆ. ಅನುಮತಿಸಲಾದ ಸಮಯ ಮೀರಿ ಪಬ್ ನಡೆಸುತ್ತಿದ್ದಕ್ಕಾಗಿ ಪೊಲೀಸರು ಆ ಹೋಟೆಲ್ ಆಡಳಿತದ ಸಿಬ್ಬಂದಿಯನ್ನೂ ಬಂಧಿಸಿದ್ದಾರೆ.
ಪೊಲೀಸರು ಆಕೆ ಕ್ಲೀನ್ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖಚಿತಪಡಿಸಿದ್ದಾರೆ.
ಡ್ರಗ್ಸ್ ಪತ್ತೆಯಾಗಿದೆ ಎಂದು ನಾಗಬಾಬು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಆಧಾರ ರಹಿತ ಮಾಹಿತಿಯ ಮೇಲೆ ಊಹಾಪೋಹ ಮಾಡಬೇಡಿ ಎಂದು ಅವರು ಎಲ್ಲರಿಗೂ ಮನವಿ ಮಾಡಿದರು. “ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಆಧಾರರಹಿತ ಸುದ್ದಿಗಳು ಹರಿದಾಡುತ್ತಿರುವುದನ್ನು ನಾನು ನೋಡಿದ್ದೇನೆ. ಇಂತಹ ವದಂತಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ನಾಗಬಾಬು ಒತ್ತಾಯಿಸಿದ್ದಾರೆ.
- ಲಖನೌ ತಂಡವನ್ನು14 ರನ್ ಗಳಿಂದ ಮಣಿಸಿದ RCB – ಫೈನಲ್ ಪಂದ್ಯಕ್ಕೆ ಇನ್ನೂ ಒಂದು ಗೆಲವು ಅಗತ್ಯ
- ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್ ಬಂಧನ: ಜೈಲು
- ಮಂಡ್ಯದಲ್ಲಿ ಮಳೆ ಹಾನಿ ನಷ್ಟಕ್ಕೆ 2 ದಿನದೊಳಗೆ ಪರಿಹಾರ ಕೊಡಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದೇಶ
- ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ
- ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ
- ಪದವೀಧರರ ಕ್ಷೇತ್ರದ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ನಾಮಪತ್ರ ಸಲ್ಲಿಕೆ
More Stories
ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ
ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ : ತಾಂಬೂಲ ಪ್ರಶ್ನೆ ಅಂತ್ಯ
ಮಳಲಿ ಮಸೀದಿಯಲ್ಲಿ ದೇವಸ್ಥಾನದ ಕುರುಹು ಪತ್ತೆ- ತಾಂಬೂಲ ಪ್ರಶ್ನೆ ಆರಂಭ