December 23, 2024

Newsnap Kannada

The World at your finger tips!

drugs , ganja , smuggling

ಡ್ರಗ್ಸ್ ಪ್ರಕರಣಗಳ ನಿವಾರಣೆಗೆ ಸಿಕ್ಕಿಂ ಮಹತ್ವದ ಕಾಯ್ದೆ ಆಚರಣೆ

Spread the love

ದೇಶದಲ್ಲಿನ ಚಾಲ್ತಿಯಲ್ಲಿರುವ ನಿರುದ್ಯೋಗ, ಆರ್ಥಿಕ ಸಮಸ್ಯೆ, ಮುಂತಾದ ವಿಚಾರಗಳನ್ನು ಬಿಟ್ಟು ಇಡೀ ಭಾರತೀಯ ಮಾಧ್ಯಮಗಳು ಕೊರೋನಾ, ಡ್ರಗ್ಸ್ ಪ್ರಕರಣಗಳ ಹಿಂದೆ ಹೋಗುತ್ತಿದ್ದಾರೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ಆದರೆ ಸಿಕ್ಕಿಂ ರಾಜ್ಯವು ಡ್ರಗ್ಸ್ ಪ್ರಕರಣಗಳನ್ನು ತಡೆಯಲು ತನ್ನ ರಾಜ್ಯದಲ್ಲಿ ಒಂದು ಮಹತ್ವದ ಕಾಯ್ದೆಯನ್ನು ರೂಪಿಸಿದೆ. ಅದೇ SADA ಕಾಯ್ದೆ.

ಸಿಕ್ಕಿಂ ನಲ್ಲಿ ಮೊದಲು ಔಷಧೀಯ ಉತ್ಪನ್ನಗಳನ್ನು ಮಾದಕ ಸೇವನೆಗೆಂದು ಬಳಸಿಕೊಳ್ಳಲಾಗುತ್ತಿತ್ತು. ನೈಟ್ರೋಸುನ್, ಕಾಫ್ ಸಿರಪ್ ನಂತಹ ಔಷಧಗಳನ್ನು ಮಾದಕ ವ್ಯಸನಿಗಳು ಮಾದಕ ವಸ್ತುಗಳನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಇದಕ್ಕೆಂದೆ ಸಿಕ್ಕಿಂ ಮಾದಕವಸ್ತು ವಿರೋಧಿ ಕಾಯ್ದೆ (SADA)ಯನ್ನು ೨೦೦೬ ರಲ್ಲಿ ಜಾರಿಗೆ ತಂದಿತು. ಇದು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, ೧೯೮೫ (ಎನ್ ಡಿ ಪಿಎಸ್ ಆಕ್ಟ್) ನ್ನು ಈ ಕಾಯ್ದೆಯಲ್ಲಿ ಮಾದಕವ್ಯಸನಿಗಳಿಗೆ ಜೈಲು ಶಿಕ್ಷೆ ವಿಧಿಸಲು ಅನುಮತಿ ಇರಲಿಲ್ಲ. ಆದರೆ ೧೦,೦೦೦ ದಂಡ ವಿಧಿಸಬಹುದಿತ್ತು. ನಂತರ ಈ ದಂಡದ ಮೊತ್ತ ೫೦,೦೦೦ಕ್ಕೇರಿತು. ಡ್ರಗ್ಸ್ ಪ್ರಕರಣಗಳ, ಮಾದಕ ವ್ಯಸನಿಗಳ ಸಂಖ್ಯೆ ಮಾತ್ರ ಇಳಿಯಲಿಲ್ಲ. ಹಾಗಾಗಿ SADA ಕಾಯ್ದೆಗೆ ೨೦೧೭ ರಲ್ಲಿ ತಿದ್ದುಪಡಿ ತರಲಾಯ್ತು. ಈ ತಿದ್ದುಪಡಿ ಪ್ರಕಾರ ಸಣ್ಣ ಪ್ರಮಾಣದ ಬಳಕೆದಾರರನ್ನು ‘ಡ್ರಗ್ಸ್ ಗ್ರಾಹಕರು’ ಎಂದು, ದೊಡ್ಡ ಪ್ರಮಾಣದ ಬಳಕೆದಾರರನ್ನು ‘ಡ್ರಗ್ಸ್ ಪೆಡ್ಲರ್’ಗಳೆಂದು ವರ್ಗೀಕರಿಸಲಾಯ್ತು.

ಈ ನಿಟ್ಟಿನಲ್ಲಿ ಡ್ರಗ್ಸ್ ಗ್ರಾಹಕರಿಗೆ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಹಾಗೂ ಪುನರ್ವಸತಿಗಳನ್ನು ಕಲ್ಪಿಸಿ ಕೊಡಲಾಯ್ತು. ‘ಡ್ರಗ್ಸ್ ಪೆಡ್ಲರ್’ ಗಳಿಗೆ ದೊಡ್ಡ ಪ್ರಮಾಣದ ಶಿಕ್ಷೆ ವಿಧಿಸಲಾಗುತ್ತಿತ್ತು.

೨೦೧೯ರಲ್ಲಿ SADA ಕಾಯ್ದೆಯು ಇನ್ನೊಂದು ತಿದ್ದುಪಡಿ ಮಾಡಿತು. ಆ ತಿದ್ದುಪಡಿ ಪ್ರಕಾರ ಯಾವುದೇ ಡ್ರಗ್ಸ್ ಅಕ್ರಮ ಬಳಕೆ ಅಪರಾಧವಲ್ಲ ಎಂದು ಸಿಕ್ಕಿಂ ಘೋಷಣೆ ಮಾಡಿತು. ಇದರ ಮೂಲಕ ಅಕ್ರಮ ಡ್ರಗ್ಸ್ ಬಳಕೆದಾರರಿಗೆ ಮಾನಸಿಕ ಸ್ಥೈರ್ಯವನ್ನು ನೀಡಿ, ಮೊದಲೇ ನೊಂದಾಯಿತವಾದ ಸೆಂಟರ್ ಗೆ ಕಳುಹಿಸಿ ಅವರಿಗೆ ಚಿಕಿತ್ಸೆ ಮಾಡುವದನ್ನು ಸಿಕ್ಕಿಂ ಸರ್ಕಾರ ಮಾಡಿತು. ಇದರಿಂದ ಬಳಕೆದಾರರನ್ನು ಬಿಟ್ಟು ಡ್ರಗ್ಸ್ ಪೆಡ್ಲರ್ ಗಳ ಕಡೆ ಸಿಕ್ಕಿಂ ಗಮನವಹಿಸಿ, ದಂಧೆಯನ್ನು ಮಟ್ಟಹಾಕುವ ಕಡೆ ಗಮನ ವಹಿಸಿತು.

ಈಗ ಸಿಕ್ಕಿಂನಲ್ಲಿ ಡ್ರಗ್ಸ್ ಖೈದಿಗಳ ಸಂಖ್ಯೆ ೬೬. ಈ ಮೊದಲು ಇದು ೨೦೦ಕ್ಕೂ ಅಧಿಕವಾಗಿತ್ತು.

ಸಿಕ್ಕಿಂನ ರೀತಿಯಲ್ಲೇ ನಮ್ಮ ಸರ್ಕಾರವೂ ಸಹ ಪ್ರಭಾವಯುತವಾದ ಕಾಯ್ದೆಗಳನ್ನು ತರಬೇಕು.

Copyright © All rights reserved Newsnap | Newsever by AF themes.
error: Content is protected !!