ಕಳೆದ 4 ತಿಂಗಳಿನಿಂದ ತಲೆಮರೆಸಿ ಕೊಂಡಿದ್ದ ಡ್ರಗ್ಸ್ ಪ್ರಕರಣದ ಆರನೇ ಆರೋಪಿ ಮಾಜಿ ಸಚಿವ ದಿ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ನನ್ನು ಸೋಮವಾರ ರಾತ್ರಿ ಚೆನ್ನೈ ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.
ಆದಿತ್ಯ ಆಳ್ವ ಬಂಧನಕ್ಕೆ ಔಟ್ ಲುಕ್ ನೋಟಿಸ್ ಅನ್ನು ಕೂಡ ಪೋಲಿಸರು ಹೊರಡಿಸಿದ್ದರು. ಅನೇಕರಿಗೆ ನೇರವಾಗಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆದಿತ್ಯ ಆಳ್ವ ಎರಡು ತಿಂಗಳಿನಿಂದ ಸಿಸಿಬಿ ಪೋಲಿಸರಿಗೆ ಸಾಕಷ್ಟು ಚೆಳ್ಳೇಹಣ್ಣು ತಿನ್ನಿಸಿದ್ದನೆಂದು ಹೇಳಲಾಗಿದೆ.
ಪೇಜ್ ತ್ರೀ ಪಾರ್ಟಿಗಳ ಜನಕ ವಿರೇನ್ ಸಹವಾಸದಿಂದ ಆದಿತ್ಯ ಆಳ್ವ ಡ್ರಗ್ಸ್ ದಂಧೆಗೆ ಇಳಿದಿದ್ದ. ಅಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೂಡ ತೊಡಗಿಸಿಕೊಂಡಿದ್ದ. ಪಾರ್ಟಿಗಳನ್ನು ಆಯೋಜನೆ ಮಾಡಿ ಅಲ್ಲಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು.
ಜೀವರಾಜ್ ಆಳ್ವ ಹಾಗೂ ಖ್ಯಾತ ನೃತ್ಯ ಗಾರ್ತಿ ನಂದಿನ ಆಳ್ವ ಅವರಿಗೆ ಪ್ರಿಯಾಂಕಾ ಹಾಗೂ ಆದಿತ್ಯ ಆಳ್ವ ಎಂಬ ಇಬ್ಬರು ಮಕ್ಕಳು. ಇವರಲ್ಲಿ ಪ್ರಿಯಾಂಕಾ ಹಿಂದಿ ಚಿತ್ರ ರಂಗದ ನಟ ವಿವೇಕ್ ಓಬೇರಾಯ್ ಅವರನ್ನು ವಿವಾಹವಾಗಿ ಮುಂಬಯಿ ನಲ್ಲಿ ನೆಲೆಸಿದ್ದಾರೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.