February 22, 2026

Newsnap Kannada

The World at your finger tips!

lankesh

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್‌ ದಂಧೆ:ಮೀನು ಹಿಡಿದಿದ್ದಾರೆ- ತಿಮಿಂಗಿಲ ಮಿಸ್ ಅಗಿವೆ : ಇಂದ್ರಜಿತ್ ಲಂಕೇಶ್

Spread the love

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಬಿ ಇಂದು ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಅವರನ್ನು ಸಿಸಿಬಿ ಕಚೇರಿಗೆ ಕರೆಸಿ ಕಾರಣಾಂತರಗಳಿಂದ ‌ ವಿಚಾರಣೆ ಮುಂದೂಡಿಕೆಯಾಗಿದೆ.

ತಿಮಿಂಗಿಲ‌ ಮಿಸ್ ಆಗಿವೆ :

ಸಿಸಿಬಿ ಕಚೇರಿ ಭೇಟಿ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ದೇಶಕ ಇಂದ್ರಜೀತ್, ‘ ಸಿಸಿಬಿ ಇದುವರೆಗೂ ಮೀನುಗಳನ್ನು ಮಾತ್ರ ಹಿಡಿದಿದ್ದಾರೆ. ತಿಮಿಂಗಲ ಹಿಡಿಯೋದು ಬಾಕಿ ಇದೆ ಎಂದರು.

ಸ್ಯಾಂಡಲ್ ವುಡ್ ಡ್ರಗ್ಸ್‌ ದಂಧೆಯಲ್ಲಿ ಕೇವಲ ನಟಿಯರಷ್ಟೇ ಪ್ಲೇಡರ್‌ʼಗಳಲ್ಲ. ಇದರಲ್ಲಿ ಪ್ರಮುಖ ನಟಿ, ನಟಿಯರು, ನಿರ್ದೇಶಕ, ನಿರ್ಮಾಪಕರ ಮಕ್ಕಳು, ರಾಜಕಾರಣಿಗಳ ಮಕ್ಕಳು ಇದ್ದಾರೆ ಎಂದು ಇಂದ್ರಜಿತ್ ಹೇಳಿದರು.

ನಾನು ವೈಯಕ್ತಿಕವಾಗಿ ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಇನ್ನು ಇದೇನೂ ರಾಜಕೀಯ ವಿಷಯವೂ ಅಲ್ಲ. ಆದರೂ ಸಹ ಅಧಿವೇಶನದಲ್ಲಿ ಡ್ರಗ್ಸ್ ದಂಧೆ ಬಗ್ಗೆ ಚರ್ಚೆಯಾಗಬೇಕು ಎಂದು ಸಲಹೆ ನೀಡಿದರು.

error: Content is protected !!