January 9, 2025

Newsnap Kannada

The World at your finger tips!

a9b06f58 a828 457b 8c08 838ab72cb153

ಡ್ರಗ್ ಕೇಸ್- ನಿರೂಪಕಿ ಅನುಶ್ರೀ ವಿಚಾರಣೆ ನಡೆಸಿದ್ದ ಅಧಿಕಾರಿಗಳ ವರ್ಗಾವಣೆ

Spread the love

ಮಂಗಳೂರು ಡ್ರಗ್ಸ್‌ ಮೂಲದ ತನಿಖಾ ತಂಡದ ನೇತೃತ್ವ ವಹಿಸಿದ್ದ ಸಿಸಿಬಿ ಇನ್ಸ್‌ಪೆಕ್ಟರ್‌ ಶಿವಪ್ರಕಾಶ್‌ ಹಾಗೂ ಎಸ್‌ಐ ಕಬ್ಬಳ್‌ರಾಜ್‌ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಸಿಸಿಬಿ ಇನ್ಸ್‌ ಪೆಕ್ಟರ್‌ ಶಿವಪ್ರಕಾಶ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅವರ ಜಾಗಕ್ಕೆ ಮಹೇಶ್‌ ಪ್ರಸಾದ್‌ ಅವರನ್ನು ನಿಯೋಜಿಸಲಾಗಿತ್ತು. 

ನಿರೂಪಕಿ, ನಟಿ ಅನುಶ್ರೀ ಅವರನ್ನು ಮಂಗಳೂರಿಗೆ ತನಿಖೆಗೆ ಕರೆಸಿದ ಬಳಿಕ ಶಿವಪ್ರಕಾಶ್‌ ವರ್ಗಾವಣೆ ನಡೆದಿತ್ತು. ಅವರನ್ನು ಬೆಂಗಳೂರು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು.

ಬಳಿಕ ಸಾರ್ವಜನಿಕ ಆಕ್ಷೇಪದ ಹಿನ್ನೆಲೆಯಲ್ಲಿ ವರ್ಗಾವಣೆ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ವರ್ಗಾವಣೆ ಮಾಡಲಾಗಿದೆ. ಚಿಕ್ಕಮಗಳೂರಿಗೆ ಕಬ್ಬಳ್‌ರಾಜ್‌ರನ್ನು ವರ್ಗಾಯಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!