ರಾಜ್ಯದಲ್ಲಿ 151 ತಾಲೂಕುಗಳಲ್ಲಿ ಬರ ಘೋಷಣೆ: ಸಿಎಂಗೆ ಶಿಫಾರಸ್ಸು

Team Newsnap
1 Min Read

ಬೆಂಗಳೂರು : ಮಳೆ ಕೊರತೆ ಹಿನ್ನಲೆ ಪ್ರಕೃತಿ ವಿಕೋಪ ಪರಿಸ್ಥಿತಿ ನಿಭಾಯಿಸುವ ಕುರಿತು ಇಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಾಯಿತು.

ರಾಜ್ಯದಲ್ಲಿ 151 ತಾಲ್ಲೂಕುಗಳಲ್ಲಿ ಗಂಭೀರ ಸ್ವರೂಪದ ಹಾಗೂ 34 ತಾಲ್ಲೂಕುಗಳಲ್ಲಿ ಸಾಧಾರಣ ಸ್ವರೂಪದ ಬರ ಪರಿಸ್ಥಿತಿ ಇರುವ ಬಗ್ಗೆ ಗ್ರೌಂಡ್ ಟ್ರುಥ್ ವೆರಿಫಿಕೇಷನ್ ವರದಿ ಖಚಿತ ಪಡಿಸಿರುವ ಕುರಿತು ಚರ್ಚೆ ನಡೆಸಲಾಯಿತು.

195 ತಾಲ್ಲೂಕುಗಳಲ್ಲಿ ಬರ ಘೋಷಣೆಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಕುರಿತು ಮುಖ್ಯ ಮಂತ್ರಿಯವರ ಅನುಮೋದನೆಗೆ ಕಳುಹಿಸಿಕೊಡಲು ಸಭೆ ತೀರ್ಮಾನಿಸಿದೆ.

ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಸಹ ಸಭೆ ನಿರ್ಧರಿಸಿದೆ.ತಮಿಳುನಾಡಿಗೆ ನೀರು ಸುತಾರಾಂ ಬಿಡದೇ ಇರಲು ನಿರ್ಧಾರ : ಸರ್ವ ಪಕ್ಷ ಸಭೆ ನಿರ್ಧಾರ

ಕಂದಾಯ ಸಚಿವರಾದ ಕೃಷ್ಣಾ ಬೈರೆಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೃಷಿ ಸಚಿವರಾದ ಎನ್ .ಚಲುವರಾಯಸ್ವಾಮಿ, ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕಾ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Share This Article
Leave a comment