ಆರ್ ಟಿ ಓ ಇನ್ಸ್ ಪೆಕ್ಟರ್ ಬದಲು ವಸೂಲಿಗೆ ಇಳಿದ ಚಾಲಕ : ವಿಡಿಯೋ ವೈರಲ್

Team Newsnap
1 Min Read

ಆರ್ ಟಿ ಓ ಇನ್ಸ್‌ಪೆಕ್ಟರ್ ಇಲ್ಲದೇ ಚಾಲಕವೊಬ್ಬ ರಸ್ತೆ ಬದಿಯಲ್ಲಿ ಜೀಪ್ ನಿಲ್ಲಿಸಿಕೊಂಡು ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮಳವಳ್ಳಿಯಲ್ಲಿ ಜರುಗಿದೆ.

ಪಟ್ಟಣದ ಹೊರವಲಯದ ಶಾಂತಿ ಶಿಕ್ಷಣ ಸಂಸ್ಥೆಯ ಬಳಿ ಮಂಡ್ಯ ಆರ್ ಟಿ ಓ ಇಲಾಖೆಯ ಜೀಪ್ ಚಾಲಕ ತನ್ನ ಮೇಲಾಧಿಕಾರಿ ಇಲ್ಲದೇ ರಸ್ತೆ ಬದಿಯಲ್ಲಿ ಜೀಪ್ ನಿಲ್ಲಿಸಿಕೊಂಡು ವಾಹನಗಳನ್ನು ಅಡ್ಡಗಟ್ಟಿದ್ದಾನೆ.

ಇದೇ ವೇಳೆ ಸಾರಿಗೆ ಇನ್ಸ್ ಪೇಕ್ಟರ್ ಪ್ರಕರಣವೊಂದರ ಸಂಬಂಧ ಪಟ್ಟಣದ ನ್ಯಾಯಾಲಯಕ್ಕೆ ಬಂದಿದ್ದರು. ಅವರಿಗೆ ಹಣ ಕೊಡಬೇಕು ಎಂದು ವಸೂಲಿ ಮಾಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಜೀಪ್ ಚಾಲಕನ ಲಾರಿ ಚಾಲಕನ ಬಳಿ ಆರು ಸಾವಿರ ಹಣ ಕೇಳುತ್ತಿದ್ದ ವೇಳೆ ವಿಡೀಯೋ ಮಾಡಿದ್ದಾರೆ.

ಸಾರ್ವಜನಿಕರು ಚಾಲಕನ ಸುತ್ತುವರೆದು ಪ್ರಶ್ನೆ ಮಾಡಲು ಮುಂದಾಗುತ್ತಿದಂತೆಯೇ ತಬ್ಬಿಬ್ಬಾದ ಚಾಲಕ ನಮ್ಮ ಸಾಹೇಬ್ರು ಕೋರ್ಟ್ ಗೆ ಹೋಗಿದ್ದಾರೆ. ಬರ್ತಾರೆ ಅದಕ್ಕೆ ನಾವು ಮತ್ತು ನಮ್ಮವರು ತಪಾಸಣೆ ಮಾಡುತ್ತಿದ್ದೇವೆ ಎಂದು ಕಾರಣ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಆರ್ ಟಿ ಓ ಚಾಲಕ ತನ್ನ ಜೀಪ್ ತೆಗೆದುಕೊಂಡು ಹೋಗಿದ್ದಾನೆ. ಎನ್ನಲಾದ ವಿಡೀಯೋ ಸಖತ್ ವೈರಲ್ ಆಗಿದೆ.
ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Share This Article
Leave a comment